Header Ads
Breaking News

ಪಡೀಲ್ : ಪಕ್ಕದ ರಸ್ತೆಗೆ ಹಾರಿದ ಲಾರಿ….!

ನವ ಮಂಗಳೂರು ಬಂದರಿನಿಂದ ಮಂಡ್ಯ ಜಿಲ್ಲೆಯ ಮದ್ದೂರಿಗೆ ಕೋಕ್ ಸಲ್ಫರ್ ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ನಗರದ ರಾಷ್ಟ್ರೀಯ ಹೆದ್ದಾರಿ 75ರ ಪಡೀಲ್ ಕ್ರಾಸ್‍ನ ಸಮೀಪದಲ್ಲಿ ರಸ್ತೆ ಡಿವೈಡರ್‍ಗೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ನಡೆದಿದೆ. ಬಿಕರ್ನಕಟ್ಟೆ ಕಡೆಯಿಂದ ಪಡೀಲ್ ಮೂಲಕ ಹೆದ್ದಾರಿಗೆ ಸಾಗುತ್ತಿದ್ದ ಈ ಲಾರಿ ಹೆದ್ದಾರಿ ಸಮೀಪಿಸುವ ಮೊದಲೇ ಪಡೀಲ್ತಿರುವು ಬಳಿ ಬ್ರೇಕ್ ಫೇಲ್ ಆದ ಪರಿಣಾಮ ಡಿವೈಡರ್‍ಗೆ ಬಡಿದು ರಸ್ತೆಯ ಇನ್ನೊಂದು ಬದಿಗೆ ಮಗುಚಿ ಬಿದ್ದಿದೆ.

ಲಾರಿ ಹಿಂಬದಿ ಸಂಪೂರ್ಣ ಜಖಂ ಆಗಿದೆ. ಲಾರಿಯಲ್ಲಿದ್ದ ಕೋಕ್ ಸಲ್ಫರ್ ಚೆಲ್ಲಾಪಿಲ್ಲಿಯಾಗಿದೆ. ಅವಘಡ ವೇಳೆ ರಸ್ತೆಯ ಇನ್ನೊಂದು ಕಡೆಯಿಂದ ಯಾವುದೇ ವಾಹನಗಳು ಬಾರದೇ ಇದ್ದುದರಿಂದ ದೊಡ್ಡ ಅನಾಹುತ ತಪ್ಪಿದೆ. ಈ ಘಟನೆಯಿಂದ ಲಾರಿ ಚಾಲಕ ಪ್ರಮೋದ್ ಮತ್ತು ಕ್ಲೀನರ್ ಕಾರ್ತಿಕ್ ಎಂಬವರಿಗೆ ಗಾಯವಾಗಿದೆ. ಕಂಕನಾಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲು ಮಾಡಲಾಗಿದೆ.

 

Related posts

Leave a Reply

Your email address will not be published. Required fields are marked *