Header Ads
Breaking News

ಬಿಲಾಲ್ ಗುತ್ತಿಗೆ ಕಂಪನಿಯಿಂದ ಪಡುಬಿದ್ರಿ ಕಡಲಲ್ಲಿ ಟಗ್ ತೆರವು ಕಾರ್ಯ

ತೌಕ್ತೆ ಚಂಡಮಾರುತದಿಂದಾಗಿ ಪಡುಬಿದ್ರಿಯಲ್ಲಿ ಟಗ್‍ವೊಂದು ಪಲ್ಟಿಯಾಗಿದ್ದು, ಅದನ್ನು ಮೇಲೆತ್ತುವ ಕಾರ್ಯಾಚರಣೆ ಇಂದು ಮತ್ತೆ ಆರಂಭಿಸಿದ್ದಾರೆ. ಪಡುಬಿದ್ರಿಯ ನಡಿಪಟ್ಣ ಪ್ರದೇಶದಲ್ಲಿ ಟಗ್ ದಡ ಸೇರಿದ್ದು, ಸುಮಾರು 165 ಟನ್ ತೂಕವಿದೆ. ಇನ್ನು ಬಿಲಾಲ್ ಗುತ್ತಿಗೆ ಕಂಪನಿಯವರು ಟಗ್ ಮೇಲೆತ್ತುವ ಕಾರ್ಯ ನಡೆಸುತ್ತಿದ್ದಾರೆ.   ಟಗ್ ಅಡಿಯಿಂದ ದುರ್ನಾತ ಬೀರುತ್ತಿದೆ ಎಂದು ಅಲ್ಲಿದ್ದವರೇ ಹೇಳುತ್ತಿದ್ದು, ನಾಪತ್ತೆಯಾದವರ ಸಂಬಂಧಿಯವರು ಸ್ಥಳದಲ್ಲಿದ್ದಾರೆ. ಇನ್ನು ಸ್ಥಳಕ್ಕೆ ಮಂಗಳೂರು ಉತ್ತರ ವಲಯ ಎಸಿಪಿ ನಟರಾಜ್ ಅವರು ಭೇಟಿ ನೀಡಿದ್ದು, ಕಾರ್ಯಾಚರಣೆಯ ಮುಖ್ಯಸ್ಥ ಬಿಲಾಲ್ ಜೊತೆ ಮಾಹಿತಿ ಸಂಗ್ರಹಿಸಿದ್ದಾರೆ. ನೀರಿನ ಹರಿವು ನೋಡಿ ಕಾರ್ಯಾಚರಣೆ ಮತ್ತೆ ಆರಂಭಿಸಲಿದ್ದಾರೆ.

Related posts

Leave a Reply

Your email address will not be published. Required fields are marked *