Header Ads
Breaking News

ಪಡುಬಿದ್ರಿ ಕಡಲ ತೀರದಲ್ಲಿರುವ ಟಗ್ ಮೇಲೆತ್ತಲು ಹರಸಾಹಸ: ಬದ್ರಿಯ, ಯೋಜಕ ಸಂಸ್ಥೆಗಳಿಂದ ಜಂಟಿ ಕಾರ್ಯಚರಣೆಗೆ ಎಂಆರ್‌ಪಿಎಲ್ ಒಪ್ಪಿಗೆ

ಪಡುಬಿದ್ರಿ: ಟಗ್ ಮೇಲೆತ್ತುವ ಕಾರ್ಯಚರಣೆ ನಡೆಸುತ್ತಿದ್ದ ಬಿಲಾಲ್ ನೇತ್ರತ್ವದ ಬದ್ರಿಯ ಸಂಸ್ಥೆ ವಿಫಲವಾದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಬದ್ರಿಯ ಹಾಗೂ ಯೋಜಕ ಸಂಸ್ಥೆಗಳು ಒಂದಾಗಿ ಕಾರ್ಯಚರಿಸಲು ಎಂ.ಆರ್.ಪಿ.ಎಲ್ ನ ಎಂ.ಡಿ. ವೆಂಕಟೇಶ್ ಒಪ್ಪಿಗೆ ನೀಡುವ ಮೂಲಕ ಜಂಟಿ ಕಾರ್ಯಚರಣೆಗೆ ಅವಳಿ ಸಂಸ್ಥೆಗಳು ಮುಂದಾಗಿದೆ.

ಕಾಡಿಪಟ್ಣದ ವಿಷ್ಣು ಭಜನಾ ಮಂದಿರದಲ್ಲಿ ಜಿಲ್ಲಾಧಿಕಾರಿ ಜಗದೀಶ್ ಯವರು, ಸ್ಥಳೀಯ ಶಾಸಕರು, ಜಿ.ಪಂ.ಸದಸ್ಯರು, ತಾಪಂ. ಸದಸ್ಯರು, ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಪ್ರಮುಖರೊಂದಿಗೆ ಸೇರಿ ನಡೆಸಿದ ಸಭೆಯಲ್ಲಿ ಟಗ್ ತೆರವುಗೊಳಿಸಲು ವಿಳಂಬ ವಾಗುತ್ತಿರುವ ಬಗ್ಗೆ ಚರ್ಚೆ ನಡೆದಿದ್ದು, ಅದರಲ್ಲಿ ಸಿಲುಕಿಕೊಂಡಿರುವ ಹೆಣದಿಂದಾಗಿ ಸಾಂಕ್ರಾಮಿಕ ರೋಗಭೀತಿ ಒಂದು ಕಡೆಯಾದರೆ, ಟಗ್ ನಲ್ಲಿರುವ ಆಯಿಲ್ ಸೊರಿಕೆಯಾದರೆ ಮೀನುಗಾರಿಕೆಗೆ ಸಮಸ್ಯೆಯಾಗಲಿದೆ. ಅದಲ್ಲದೆ ಟಗ್‌ನಲ್ಲಿ ಸಿಲುಕಿಕೊಂಡಿರುವ ಹೆಣದ ವಾರಿಸುದಾರರು ದೂರದ ಮುಂಬೈಯಿಂದ ಬಂದು ಕಡಲತೀರಲ್ಲಿ ಕಾಯುವ ದಯಾನೀಯ ಸ್ಥಿತಿ ನಾವು ಗಮನಿಸುತ್ತಿದ್ದೇವೆ.

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೊಂದೇ ಟಗ್ ತೆರವು ಕಾರ್ಯ ಶೀಘ್ರವಾಗಿ ನಡೆಸುವುದು. ಪಲ್ಟಿಯಾದ ಟಗ್ ಸುಸ್ಥಿತಿಗೆ ತಂದ ತಕ್ಷಣವೇ ಅದನ್ನು ಇಲ್ಲಿಂದ ತೆರವುಗೊಳಿಸ ಬೇಕು. ಇಲ್ಲಿ ಆ ಟಗ್ಗನ್ನು ಹೊಡೆಯುವ ಕಾರ್ಯ ನಡೆಸಬಾರದು ಎಂಬುದಾಗಿ ಸ್ಥಳೀಯರು ಸಭೆಯಲ್ಲಿ ಆಗ್ರಹಿಸಿದ್ದಾರೆ. ಸ್ಥಳೀಯರ ಮಾತಿಗೆ ಜಿಲ್ಲಾಧಿಕಾರಿಗಳು ಕೂಡಾ ಧ್ವನಿ ಸೇರಿಸಿದಾಗ ಎಂ.ಆರ್. ಪಿ.ಎಲ್., ಎಂ.ಡಿ. ವೆಂಕಟೇಶ್ ನೀವು ಏನು ಹೇಳಿದ್ದೀರೋ ಅದು ನಮ್ಮ ಕರ್ತವ್ಯವಾಗಿದೆ ಅದನ್ನು ಖಂಡಿತಾ ನಡೆಸಿಕೊಡುವುದಾಗಿ ತಿಳಿಸಿದ್ದಾರೆ. ಅಂತಿಮವಾಗಿ ಭಜನಾ ಮಂದಿರದಲ್ಲಿ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಈ ಟಗ್ ತೆರವುಗೊಳ್ಳುವಂತ್ತಾಗಲೀ ಎಂಬುದಾಗಿ ಜಾತಿ- ಮತ ಭೇದ ಮರೆತು ಎಲ್ಲರೂ ಒಂದಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ವರದಿ: ಸುರೇಶ್ ಎರ್ಮಾಳ್

 

Related posts

Leave a Reply

Your email address will not be published. Required fields are marked *