Header Ads
Breaking News

ಪಡುಬಿದ್ರಿ ಕಡಲ ತೀರದಲ್ಲಿ ಮಗುಚಿ ಬಿದ್ದ ಟಗ್ : ತೆರವು ಕಾರ್ಯಚರಣೆ ವಿಫಲ

ಕಳೆದ ಎರಡು ದಿನಗಳಿಂದ ಪಡುಬಿದ್ರಿ ಕಡಲ ತೀರದಲ್ಲಿ ಮಗುಚಿ ಬಿದ್ದ ಟಗ್ಗನ್ನು ತೆರವುಗೊಳಿಸಲು ಬಿಲಾಲ್ ನೇತೃತ್ವದ ಬದ್ರಿಯಾ ತಂಡ ವಿಫಲವಾಗಿದ್ದು, ಇದೀಗ ಮತ್ತೆ ಮೂರನೇ ದಿನವೂ ಕೆಲವೂಂದು ತಾಂತ್ರಿಕ ದೋಷಗಳಿಂದ ಮತ್ತೆ ಕಾರ್ಯಚರಣೆಗೆ ಹಿನ್ನಡೆಯಾಗಿದೆ.
ನೂರಾರು ಮನೆಗಳಿರುವ ಪ್ರದೇಶ ಪಡುಬಿದ್ರಿ ನಡಿಪಟ್ಣ, ಕಳೆದ ಏಳು ದಿನಗಳಿಂದಲೂ ಟಗ್ ಈ ಪ್ರದೇಶದಲ್ಲಿ ಮಗುಚಿ ಬಿದ್ದ ಸ್ಥಿತಿಯಲ್ಲಿದ್ದು, ಆರಂಭದ ನಾಲ್ಕುದಿನ ನೀರಿನ ಅಬ್ಬರದಿಂದ ತೆರವು ಕಾರ್ಯಕ್ಕೆ ಹಿನ್ನಡೆಯಾಗಿತ್ತು, ಆ ಬಳಿಕ ಹನ್ನೊಂದು ಲಕ್ಷ ರೂಪಾಯಿಗೆ ಬಿಲಾಲ್ ನೇತೃತ್ವದ ಬದ್ರಿಯ ತಂಡ ಇದನ್ನು ತೆರವುಗೊಳಿಸಲು ವಹಿಸಿಕೊಂಡಿತ್ತು, ಆದರೆ ಕಳೆದ ಮೂರು ದಿನಗಳಿಂದಲೂ ಒಂದಲ್ಲ ಒಂದು ಕಾರಣದಿಂದಾಗಿ ಕಾರ್ಯಚರಣೆಗೆ ಹಿನ್ನಡೆಯಾಗುತ್ತಿದೆ, ಒಂದು ಕಡೆಯಿಂದ ಟಗ್‍ನಡಿಯಲ್ಲಿ ಸಿಲುಕಿಕೊಂಡಿರುವ ಶವದ ದುರ್ನಾತದಿಂದಾಗಿ ಈ ಪ್ರದೇಶದ ಜನರಿಗೆ ಸಾಂಕ್ರಮಿಕ ರೋಗ ಭೀತಿ ಎದುರಾದರೆ, ಮತ್ತೊಂದು ಕಡೆ ಶವದ ವಾರಿಸುದಾರರು ಕಳೆದ ಐದು ದಿನಗಳಿಂದಲೂ ತಮ್ಮವರ ಶವಕ್ಕಾಗಿ ದೂರದ ಮುಂಬೈಯಿಂದ ಬಂದು ಸಮುದ್ರ ದಂಡೆಯಲ್ಲಿ ರಾತ್ರಿ ಹಗಲು ಕಾಯುತ್ತಿದ್ದಾರೆ.

Related posts

Leave a Reply

Your email address will not be published. Required fields are marked *