Header Ads
Breaking News

ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಿಸಿ ದಿಢೀರ್ ಭೇಟಿ ಮಾಡಿ ಪರಿಶೀಲನೆ

udupi dc

ಕೊವೀಡ್ ಲಸಿಕೆ ನೀಡುತ್ತಿರುವ ವೇಳೆ ಗೊಂದಲ ನಡೆಯುತ್ತಿದ್ದ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ದಿಢೀರ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಸರಿಯಾದ ಕ್ರಮದಲ್ಲಿ ಮಾಸ್ಕ್ ಧರಿಸದ ಆಸ್ಪತ್ರೆಯ ಸಿಬ್ಬಂದಿಗಳಿಗೆ ಬಾಗಿಲಲ್ಲೇ ಪಾಠ ಮಾಡಿದ ಜಿಲ್ಲಾಧಿಕಾರಿ ವೈದ್ಯಾಧಿಕಾರಿಯನ್ನು ಕರೆದು ಈ ಬಗ್ಗೆ ತಿಳಿ ಹೇಳುವಂತೆ ಸೂಚನೆ ನೀಡಿದ್ದಾರೆ. ಲಸಿಕೆ ನೀಡುವ ಕೊಠಡಿಗೆ ತೆರಳಿ 45 ವರ್ಷಗಳ ಮೇಲ್ಪಟ್ಟವರನ್ನು ಮಾತನಾಡಿಸಿ, ಆರಂಭದಲ್ಲೇ ಲಸಿಕೆ ಪಡೆಯ ಬೇಕಾಗಿದ್ದ ನೀವು ಇಷ್ಟು ವಿಳಂಬ ಏಕೆ ಎಂಬ ಜಿಲ್ಲಾಧಿಕಾರಿಗಳ ಪ್ರಶ್ನೆಗೆ ನಗುವೆ ಉತ್ತರ ಎಂಬಂತ್ತಾಗಿದೆ. ಆ ಬಳಿಕ ಕಡತಗಳನ್ನು ಪರಿಶೀಲನೆ ಮಾಡಿದ ಅವರು ವೈಧ್ಯಾಧಿಕಾರಿಗೆ ಪೂರಕ ಮಾಹಿತಿಯನ್ನು ಒದಗಿಸಿ, ಮುಂದಿನ ದಿನಗಳಲ್ಲಿ ಪ್ರೈಮರಿ ಹೊಂದಿದವರನ್ನು ಸಂಪರ್ಕದವರನ್ನು ಖಡ್ಡಾಯವಾಗಿ ಪರೀಕ್ಷೆಗೊಳಪಡಿಸುವಂತ್ತೆ ಆದೇಶ ಮಾಡಿದ್ದಾರೆ. ಆಸ್ಪತ್ರೆಯ ಹೊರ ಭಾಗದಲ್ಲಿ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಬಳಿಕ ಕೊರೋನಾ ಸೋಂಕಿತ ಬ್ರೇಂಗ್ರೆಯ ಮನೆಯೊಂದಕ್ಕೆ ತೆರಳಿ ಯೋಗಕ್ಷೇಮ ವಿಚಾರಿಸಿದ್ದಾರೆ.

 

Related posts

Leave a Reply

Your email address will not be published. Required fields are marked *