Header Ads
Breaking News

ಪತ್ರಕರ್ತರ ಸಂಕಷ್ಟಕ್ಕೆ ಮಿಡಿದ ರಾವಸಾಬ್ ಐಹೊಳೆ

 

ಕೊವಿಡ್ ಮಹಾಮಾರಿಯ ಸಂಕಷ್ಟದ ಸಮಯದಲ್ಲಿ ಸರ್ಕಾರದಿಂದ ಪ್ರಂಟ್ ಲೈನ್ ವಾರಿಯರ್ ಗಳು ಎಂದು ಗುರುತಿಸಿದ್ದರೂ ಕೂಡ ಪತ್ರಕರ್ತರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡದೆ ಇರುವದರಿಂದ ಲಾಕ್ ಡೌನ್ ಸಮಯದಲ್ಲಿ ಪತ್ರಕರ್ತರು ಕೂಡ ಸಂಕಷ್ಟಕ್ಕೆ ಸಿಲುಕಿರುವದನ್ನು ಅರಿತು ಪುರಸಭೆಯ ಮಾಜಿ ಅಧ್ಯಕ್ಷ ರಾವಸಾಬ್ ಐಹೊಳೆ ಅವರು ಪಡಿತರ ಕಿಟ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದರು.

ಕಳೆದ ಬಾರಿಯೂ ಆರ್ಥಿಕವಾಗಿ ಹಿಂದೆ ಉಳಿದ ಹಲವಾರು ಕುಟುಂಬಗಳಿಗೆ ಸಹಾಯ ಹಸ್ತಚಾಚಿದ್ದ ರಾವಸಾಬ ಐಹೊಳೆ ಅವರು ಸಂಕೋನಟ್ಟಿ ಗ್ರಾಮದ ಅಲೆಮಾರಿ ಜನಾಂಗದವರಿಗೆ ಮತ್ತು ತಾಂವಶಿ ಗ್ರಾಮ ಹಾಗೂ ಅಥಣಿ ಪಟ್ಟಣದ ಕಡು ಬಡವರಿಗೆ, ಸುಮಾರು ಹತ್ತು ಲಕ್ಷ ರೂಪಾಯಿ ಸ್ವಂತ ಖರ್ಚಿನಲ್ಲಿ ಸುಮಾರು 1200, ಹೆಚ್ಚು ಬಡಕುಟುಂಬಗಳಿಗೆ ಮತ್ತು ಪತ್ರಕರ್ತರಿಗೆ ಪಡಿತರ ಪ್ಯಾಕ್ ವಿತರಿಸಿದ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಂಕೋನಟ್ಟಿ ಗ್ರಾಮದ ಅಲೆಮಾರಿ ಜನಾಂಗ ಕುಟುಂಬದ ಸದಸ್ಯ ಮಾತನಾಡಿ, ನಾವು ದಿನಾಲು ಕೆಲಸಕ್ಕೆ ಹೋದಾಗ ಮಾತ್ರ ಹೊಟ್ಟೆ ತುಂಬುತ್ತದೆ. ಕೊರೋಣ ಮಹಾಮಾರಿ ಎರಡನೇ ಅಲೆಯಿಂದಾಗಿ ಲಾಕ್ಡೌನ್ ಆದ ಕಾರಣ ಒಪ್ಪತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು ಅಂತ ಸಂದರ್ಭದಲ್ಲಿ ಅಥಣಿ ಪುರಸಭೆ ಮಾಜಿ ಅದ್ಯಕ್ಷ ರಾವಸಾಬ ಐಹೊಳೆ ಯವರಿಗೆ ಕರೆ ಮಾಡಿ ನಮ್ಮ ಸಂಕಷ್ಟವನ್ನು ಅವರ ಮುಂದೆ ಹಂಚಿಕೊಂಡಾಗ ತಕ್ಷಣ ಅವರು ನಮ್ಮ ಕುಟುಂಬಗಳಿಗೆ ಪಡಿತರ ಸಹಾಯ ಹಸ್ತವನ್ನು ಚಾಚಿದ್ದಾರೆ ಎಂದರು.

Related posts

Leave a Reply

Your email address will not be published. Required fields are marked *