Header Ads
Breaking News

ಪರಿಸ್ಥಿತಿ ನಿರ್ವಹಿಸುವ ನೈತಿಕತೆಯಿಲ್ಲದವರು ರಾಜೀನಾಮೆ ಕೊಡಿ : ಮಾಜಿ ಸಚಿವ ಅಭಯಚಂದ್ರ ಜೈನ್

ಮೂಡುಬಿದಿರೆ: ಸಾಕಷ್ಟು ಲಸಿಕೆ ಸಂಗ್ರಹವಿಲ್ಲದೇ ಅಭಿಯಾನಕ್ಕೆ ಮುಂದಾದ ಕೇಂದ್ರ ಸರಕಾರ, ನಾಯಕತ್ವದ ಕೊರತೆಯಿಲ್ಲದೇ ರಾಜ್ಯದಲ್ಲೂ ಆಕ್ಸಿಜನ್ ಕೊರತೆಗೆ ಕಾರಣರಾದ ಜನನಾಯಕರಿಂದಾಗಿ ಕೋವಿಡ್ ಸಂಕಟದ ನಡುವೆ ಮುಗ್ಧ ಜನತೆಯ ಮಾರಣ ಹೋಮ ನಡೆಯುವಂತಾಗಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.

ಅವರು ಮೂಡುಬಿದಿರೆ ಪ್ರೆಸ್ ಕ್ಲಬ್‍ನಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಉಂಟಾದ ದುರಂತ ಘಟನೆಗಳ ಹೊರತಾಗಿಯೂ ಅಲ್ಲಿನ ಜನಪ್ರತಿನಿಧಿಗಳು ಬಿಡಿ ಯಾವೊಬ್ಬ ಅಧಿಕಾರಿಯ ಮೇಲೂ ಕ್ರಮ ಜರಗಿಸಲು ಸರಕಾರ ಮುಂದಾಗಲಿಲ್ಲ. ಇದೀಗ ಜವಾಬ್ದಾರಿ ಸ್ಥಾನದಲ್ಲಿರುವ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಲಸಿಕೆ ಕೊರತೆಯ ಬಗ್ಗೆ ನಾವು ನೇಣು ಹಾಕಿಕೊಳ್ಳಬೇಕಾ ಎಂದರೆ ಸಿಟಿ ರವಿ ಇನ್ನೂ ಮುಂದುವರೆದು ನ್ಯಾಯಾಧೀಶರೇನು ಸರ್ವಜ್ಞರಲ್ಲ ಎನ್ನುವ ಮಟ್ಟಕ್ಕೆ ಮಾತನಾಡುತ್ತಿರುವುದು ಸರಿಯಲ್ಲ. ಪರಿಸ್ಥಿತಿ ನಿರ್ವಹಿಸುವ ಯೋಗ್ಯತೆಯಿಲ್ಲದವರು ರಾಜೀನಾಮೆ ಕೊಟ್ಟು ಹೊರಗೆ ಬನ್ನಿ ಎಂದು ಹೇಳಿದ್ದಾರೆ.

ಆಕ್ಸಿಜನ್ ಕೊರತೆ ಬಗ್ಗೆ ಆರೋಗ್ಯ ಸಚಿವರಿಗೆ ಮೊದಲೇ ಮಾಹಿತಿ ಇತ್ತು. ಆದರೆ ನಿರ್ಲಕ್ಷ್ಯದಿಂದಾಗಿ ಸಮಸ್ಯೆ ಕಡತದಲ್ಲೇ ಉಳಿದು ಹೋಯಿತು. ಯಾರಿಗೂ ಜನರ ಆರೋಗ್ಯದ ಕಾಳಜಿ ಇಲ್ಲ. ರಾಜ್ಯದ ಮುಖ್ಯ ಕಾರ್ಯದರ್ಶಿಯೇ ಅಸಹಾಯಕತೆಯನ್ನು ತೋಡಿಕೊಂಡಿರುವುದು ಸರಕಾರದ ವೈಫಲ್ಯವನ್ನು ತೋರಿಸಿಕೊಟ್ಟಿದೆ. ರಾಜ್ಯದ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮುಗ್ಧ ಜನತೆ ಸಂಕಟಪಡುವಂತಾಗಿದೆ. ಈಗಿನ ಪರಿಸ್ಥಿತಿಗೆ ಕೇಂದ್ರ ಮತ್ತು ರಾಜ್ಯ ಸರಕಾರವೇ ನೇರ ಹೊಣೆ ಎಂದು ಅಭಯಚಂದ್ರ ಹೇಳಿದರು.

Related posts

Leave a Reply

Your email address will not be published. Required fields are marked *