Header Ads
Breaking News

ಪಾಂಡವರಕಲ್ಲು ಶ್ರೀ ಬ್ರಹ್ಮಬೈದೆರೆ ಗರೋಡಿ : ಅಂಗಣಕ್ಕೆ ಗಾಜಿನ ಚೂರು ಹಾಕಿ ಕಿಡಿಗೇಡಿಗಳಿಂದ ದುಷ್ಕೃತ್ಯ

ಬಂಟ್ವಾಳ: ತಾಲೂಕಿನ ಬಡಗಕಜೆಕಾರು ಗ್ರಾ.ಪಂ.ವ್ಯಾಪ್ತಿಯ ಪಾಂಡವರಕಲ್ಲು ಶ್ರೀ ಬ್ರಹ್ಮ ಬೈದರ್ಕಳ ಗರೊಡಿಯ ಅಂಗಣಕ್ಕೆ ದುಷ್ಕರ್ಮಿಗಳು ಗಾಜಿನ ಬಾಟಲ್ ಒಡೆದು ಗಾಜಿನ ಚೂರುಗಳನ್ನು ಹಾಕಿ ದುಷ್ಕೃತ್ಯ ನಡೆಸಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

ಘಟನೆ ಮೇ 14 ರಂದು ರಾತ್ರಿ ಸಾರ್ವಜನಿಕರ ಗಮನಕ್ಕೆ ಬಂದಿದ್ದು,ಕಿಡಿಗೇಡಿಗಳ ಈ ದುಷ್ಕೃತ್ಯವನ್ನು ಖಂಡಿಸಿದ್ದಾರೆ. ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಪಾಂಡವರಕಲ್ಲು ಗರಡಿ ಕ್ಷೇತ್ರ ಪುರಾತನ ಇತಿಹಾಸವುಳ್ಳ ಕ್ಷೇತ್ರವಾಗಿದೆ. ಇದು ಹಿಂದೂ ಧರ್ಮಿಯರ ಮಾತ್ರವಲ್ಲದೆ ಅನ್ಯಧರ್ಮಿಯರ ನಂಬಿಕೆಯ ಕ್ಷೇತ್ರವಾಗಿದೆ. ಇಲ್ಲಿನ ಕಾರಣಿಕ ಕೇವಲ ಬಾಯಿ ಮಾತಿನಲ್ಲಿ ಮಾತ್ರವಲ್ಲದೆ ಇದನ್ನು ಕಣ್ಣಾರೆ ಕಂಡ ಅನೇಕ ಸಾಕ್ಷಿಗಳಿವೆ.ಇಂತಹ ಕಾರಣಿಕದ ಕ್ಷೇತ್ರದೊಳಗೆ ಶ್ರೀ ಕೊಡಮಣಿತ್ತಾಯ , ಶ್ರೀ ಪಿಲಿಚಾಮುಂಡಿ ಮತ್ತು ಬ್ರಹ್ಮಬೈದೆರ್ಕಳ ದೈವಸ್ಥಾನವಿದ್ದು ಅದರ ಸುತ್ತಲೂ ಕಿಡಿಗೇಡಿಗಳು ಸುಮಾರು 20 ಕ್ಕೂಅಧಿಕ ಗಾಜಿನ ಬಾಟಲಿಗಳನ್ನು ಚೂರುಚೂರಾಗು ವಂತೆ ಒಡೆದು ಹಾಕಿ ಗರಡಿಯೊಳಗೆ ಯಾರಿಗೂ ನಡೆದಾಡದಂತೆ ದುಷ್ಕೃತ್ಯ ನಡೆಸಿದ್ದಾರೆ. ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಮತ್ತಿತರ ಹಿಂದೂ ಸಂಘಟನೆಗಳು ಖಂಡಿಸಿದೆ.

 

Related posts

Leave a Reply

Your email address will not be published. Required fields are marked *