Header Ads
Breaking News

ಪುತ್ತೂರು ಜಾತ್ರೋತ್ಸವ :ಎ .16 ಮತ್ತು 17ರಂದು ಗದ್ದೆಯಲ್ಲಿ ಪಾರ್ಕಿಂಗ್ ಇಲ್ಲ

ಇತಿಹಾಸ ಪ್ರಸಿದ್ದ ಪುತ್ತೂರು ಜಾತ್ರೋತ್ಸವದ ಸಂದರ್ಭ ಎ .16 ಮತ್ತು 17 ರಂದು ಪುತ್ತೂರು ದೇವಸ್ಥಾನದ ಎದುರಿನ ಗದ್ದೆಯಲ್ಲಿ ಯಾವುದೇ ವಾಹನಗಳ ಪ್ರವೇಶಕ್ಕೆ ಹಾಗೂ ವಾಹನಗಳ ಎದುರಿನ ಗದ್ದೆಯಲ್ಲಿ ಪಾರ್ಕಿಂಗ್ ಗೆ ಅವಕಾಶ ಇಲ್ಲ ಎಂದು ಪುತ್ತೂರು ಸಂಚಾರಿ ಠಾಣೆ ಎಸ್ ಐ ರಾಮ್ ನಾಯ್ಕ್ ರವರು ತಿಳಿಸಿದ್ದಾರೆ.
ವಾಹನ ಪಾರ್ಕಿಂಗ್ ಗೆ ಪುತ್ತೂರು ನಗರದ ವಿವಿಧ ಭಾಗಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು ಅದರಂತೆ ವಾಹನ ಪಾರ್ಕ್ ಮಾಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ . ಅದರ ಹೊರತು ಪಡಿಸಿ ಬೇರೆ ಕಡೆ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಹಾಗೂ ಜನ ಸಂಚಾರಕ್ಕೆ ಅನಾನುಕೂಲ ವಾಗುವಂತೆ ವಾಹನ ನಿಲ್ಲಿಸಿದ್ದರೆ ಅಂತಹ ವಾಹನಗಳಿಗೆ ಲಾಕ್ ಹಾಕಿ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ವಾಹನ ಪಾಕಿಂಗ್ ಎಲ್ಲೆಲ್ಲಿ ?
ಉಪ್ಪಿನಂಗಡಿ ಮಾರ್ಗವಾಗಿ ಬರುವ ವಾಹನಗಳ ನಿಲುಗಡೆಗೆ ಪುತ್ತೂರಿನ ಎಪಿಎಂಸಿ ಯಾರ್ಡ್ ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆಸುಳ್ಯ ಹಾಗೂ ಸುಬ್ರಹ್ಮಣ್ಯ ಕಡೆಯಿಂದ ಬರುವ ವಾಹನಗಳಿಗೆ ತೆಂಕಿಲದ ವಿವೇಕಾನಂದ ಹೈ ಸ್ಕೂಲ್ ಆವರಣದಲ್ಲಿ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗಿದೆಮಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಕಿಲ್ಲೆ ಮೈದಾನದಲ್ಲಿ ಪಾಕಿಂಗ್ ಸೌಲಭ್ಯ ಮಾಡಲಾಗಿದೆ.ಅಲ್ಲದೇ ಬಸ್ಸು ನಿಲ್ದಾಣದಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದೂ ಸಾವರ್ಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದೂ ಕೊವೀಡ್ ನಿಯಾಮವಳಿ ಪಾಲಿಸಿ ಸುರಕ್ಷಿತವಾಗಿ ಜಾತ್ರೋತ್ಸವದಲ್ಲಿ ಪಾಲ್ಗೊಳ್ಳುವಂತೆ ರಾಮ್ ನಾಯ್ಕ್ ತಿಳಿಸಿದ್ದಾರೆ.

ವಾಹನಗಳಿಗೆ ವಾಹನ ಪಾಕಿಂಗ್ ಬಗ್ಗೆ ಪುತ್ತೂರು ಅತೀ ಹೆಚ್ಚು ಜನ ಸಂದಣಿ ಸೇರುವ ಎ 16 ಮತ್ತು 17 ರಂದು ಉತ್ಸವದಲ್ಲಿ ಪಾಲ್ಗೊಳ್ಳುವ ಸಂದರ್ಭ ಅನುಸರಿಸಬೇಕಾದ ನಿಯಮ ಹಾಗೂ ಸೂಚನೆಗಳ ಬಗ್ಗೆ ಅವರು ಮಾದ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.10ವರ್ಷ  ದ ಕೆಳಗಿನ ಮಕ್ಕಳನ್ನೂ ಹಾಗೂ 60 ವರ್ಷ ಮೇಲ್ಪಟ್ಟವರನ್ನು ಜಾತ್ರೆಗೆ ಯಾರೂ ಕರೆದುಕೊಂಡು ಬರಬಾರದು ಎಂದು ತಿಳಿಸಿದ್ದೂ ಜಾತ್ರೆ ಗದ್ದೆಯಲ್ಲಿ ಮಾಸ್ಕ್ , ಸಾಮಾಜಿಕ ಅಂತರ ಹಾಗೂ ಆಗಾಗ ಸ್ಯಾನಿಟೈಸರ್ ಬಳಕೆ ಮಾಡುವ ಮೂಲಕ ಕೊವೀಡ್ ನಿಯಾಮಾವಳಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಸೂಚಿಸಿದ್ದಾರೆ .

ಜಾತ್ರೆ ಸಮಯದಲ್ಲಿ ಕಳ್ಳಕಾಕರ ಬಗ್ಗೆ ನಿಗಾ ಇರಲಿ :
ಜಾತ್ರೋತ್ಸವದಲ್ಲಿ ಪಾಲ್ಗೊಳ್ಳಲು ಬರುವ ಸಂದರ್ಭ ಮನೆಯ ಕಾವಲಿಗಾಗಿ ಒಬ್ಬರು ನಿಲ್ಲಬೇಕು ಅಥಾವ ಪಕ್ಕದ ಮನೆಯವರಿಗೆ ಮನೆಯ ಕಡೆ ನಿಗಾ ವಹಿಸುವಂತೆ ಸೂಚಿಸಬೇಕು. ಅಲ್ಲದೇ ಜಾತ್ರೆಗೆ ರಾತ್ರಿ ವೇಳೆ ತೆರಳುವ ಸಂದರ್ಭ ಮನೆಯಲ್ಲಿ ಹೆಚ್ಚಿನ ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದಾರೆ.
ಜಾತ್ರ ಗದ್ದೆಯಲ್ಲಿ ಮಕ್ಕಳ ಕೊರಳಲ್ಲಿರುವ ಚಿನ್ನಾಭರಣಗಳನ್ನು ಪದೇ ಪದೇ ಪರಿಶೀಲನೆ ನಡೆಸುವ ಮೂಲಕ ಎಚ್ಚರಿಕೆ ವಹಿಸಬೇಕು .ಅಲ್ಲದೇ ಇತರರೂ ಕೂಡ ತಾವು ಧರಿಸಿರುವ ಚಿನ್ನಾಭರಣಗಳ ಬಗ್ಗೆ ನಿಗಾ ವಹಿಸಿಕೊಳ್ಳುವ ಮೂಲಕ ಆಗಾಗ ಅದನ್ನು ಚೆಕ್ ಮಾಡುತ್ತಿರಬೇಕು ಎಂದು ಅವರು ತಿಳಿಸಿದ್ದಾರೆ ಜಾತ್ರೆ ಗದ್ದೆಯಲ್ಲಿ ಹಾಗೂ ಮನೆ ಸುತ್ತಮುತ್ತಾ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಠಾಣೆಗೆ ಮಾಹಿತಿ ನೀಡುವಂತೆಯೂ ಅವರು ಸೂಚಿಸಿದ್ದಾರೆ .

ವಾಹನಗಳ ಬಗ್ಗೆ ಜಾಗರೂಕತೆ
ವಾಹನಗಳನ್ನೂ ಎಲ್ಲೆಲ್ಲೋ ಪಾರ್ಕ್ ಮಾಡದೇ ಇಲಾಖೆ ನಿಗದಿ ಪಡಿಸಿದ ಪಾಕಿಂಗ್ ಸ್ಥಳದಲ್ಲಿಯೇ ಪಾರ್ಕ್ ಮಾಡಬೇಕು. ಹಾಗೂ ವಾಹನವನ್ನು ಪಾರ್ಕ್ ಮಾಡಿ ಇಳಿಯುವ ಸಂದರ್ಭ ಲಾಕ್ ಮಾಡಿ, ಸರಿಯಾಗಿ ವಾಹನ ಲಾಕ್ ಆಗಿದೆ ಖಚಿತಪಡಿಸಿಕೊಂಡು ಜಾತ್ರೆಗೆ ತೆರಳುವಂತೆ ಸೂಚಿಸಿದ್ದಾರೆ.

ಕೊವೀಡ್ ಎರಡನೇ ಅಲೆಯ ಪರಿಣಾಮ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡು ಬಂದಿರುವ ಹಿನ್ನಲೆಯಲ್ಲಿ ಪುತ್ತೂರು ಜಾತ್ರೋತ್ಸವದ ಸಂದರ್ಭ ಕೊವೀಡ್ -19ನಿಯಮಾವಳಿಗಳನ್ನೂ ಕಟ್ಟು ನಿಟ್ಟಾಗಿ ಪಾಲಿಸುವಂತೆ ಪುತ್ತೂರು ನಗರ ಠಾಣೆ ಇನ್ಸ್ ಪೆಕ್ಟರ್ ಗೋಪಾಲ ನಾಯ್ಕ್ ರವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ .
.ಪುತ್ತೂರು ಜಾತ್ರೋತ್ಸವದಲ್ಲಿ ಅತೀ ಹೆಚ್ಚು ಜನ ಸಂದಣಿ ಸೇರುವ ಎ 16 ಮತ್ತು 17 ರಂದು ಉತ್ಸವದಲ್ಲಿ ಪಾಲ್ಗೊಳ್ಳುವ ಸಂದರ್ಭ ಅನುಸರಿಸಬೇಕಾದ ನಿಯಮ ಹಾಗೂ ಸೂಚನೆಗಳ ಬಗ್ಗೆ ಅವರು ಮಾದ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

10 ವರ್ಷ  ದ ಕೆಳಗಿನ ಮಕ್ಕಳನ್ನೂ ಹಾಗೂ 60 ವರ್ಷ  ಮೇಲ್ಪಟ್ಟವರನ್ನು ಜಾತ್ರೆಗೆ ಯಾರೂ ಕರೆದುಕೊಂಡು ಬರಬಾರದು ಎಂದು ತಿಳಿಸಿದ್ದೂ ಜಾತ್ರೆ ಗದ್ದೆಯಲ್ಲಿ ಮಾಸ್ಕ್ , ಸಾಮಾಜಿಕ ಅಂತರ ಹಾಗೂ ಆಗಾಗ ಸ್ಯಾನಿಟೈಸರ್ ಬಳಕೆ ಮಾಡುವ ಮೂಲಕ ಕೊವೀಡ್ ನಿಯಾಮಾವಳಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಸೂಚಿಸಿದ್ದಾರೆ. .
ಜಾತ್ರೆ ಸಮಯದಲ್ಲಿ ಕಳ್ಳಕಾಕರ ಬಗ್ಗೆ ನಿಗಾ ಇರಲಿ :
ಜಾತ್ರೋತ್ಸವದಲ್ಲಿ ಪಾಲ್ಗೊಳ್ಳಲು ಬರುವ ಸಂದರ್ಭ ಮನೆಯ ಕಾವಲಿಗಾಗಿ ಒಬ್ಬರು ನಿಲ್ಲಬೇಕು ಅಥಾವ ಪಕ್ಕದ ಮನೆಯವರಿಗೆ ಮನೆಯ ಕಡೆ ನಿಗಾ ವಹಿಸುವಂತೆ ಸೂಚಿಸಬೇಕು. ಅಲ್ಲದೇ ಜಾತ್ರೆಗೆ ರಾತ್ರಿ ವೇಳೆ ತೆರಳುವ ಸಂದರ್ಭ ಮನೆಯಲ್ಲಿ ಹೆಚ್ಚಿನ ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದಾರೆ
ಜಾತ್ರ ಗದ್ದೆಯಲ್ಲಿ ಮಕ್ಕಳ ಕೊರಳಲ್ಲಿರುವ ಚಿನ್ನಾಭರಣಗಳನ್ನು ಪದೇ ಪದೇ ಪರಿಶೀಲನೆ ನಡೆಸುವ ಮೂಲಕ ಎಚ್ಚರಿಕೆ ವಹಿಸಬೇಕು .ಅಲ್ಲದೇ ಇತರರೂ ಕೂಡ ತಾವು ಧರಿಸಿರುವ ಚಿನ್ನಾಭರಣಗಳ ಬಗ್ಗೆ ನಿಗಾ ವಹಿಸಿಕೊಳ್ಳುವ ಮೂಲಕ ಆಗಾಗ ಅದನ್ನು ಚೆಕ್ ಮಾಡುತ್ತಿರಬೇಕು ಎಂದು ಅವರು ತಿಳಿಸಿದ್ದಾರೆ ಜಾತ್ರೆ ಗದ್ದೆಯಲ್ಲಿ ಹಾಗೂ ಮನೆ ಸುತ್ತಮುತ್ತಾ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಠಾಣೆಗೆ ಮಾಹಿತಿ ನೀಡುವಂತೆಯೂ ಅವರು ಸೂಚಿಸಿದ್ದಾರೆ .ವಾಹನಗಳ ಬಗ್ಗೆ ಜಾಗರೂಕತೆ  ವಾಹನಗಳನ್ನೂ ಎಲ್ಲೆಲ್ಲೋ ಪಾರ್ಕ್ ಮಾಡದೇ ಇಲಾಖೆ ನಿಗದಿ ಪಡಿಸಿದ ಪಾಕಿಂಗ್ ಸ್ಥಳದಲ್ಲಿಯೇ ಪಾರ್ಕ್ ಮಾಡಬೇಕು. ಹಾಗೂ ವಾಹನವನ್ನು ಪಾರ್ಕ್ ಮಾಡಿ ಇಳಿಯುವ ಸಂದರ್ಭ ಲಾಕ್ ಮಾಡಿ, ಸರಿಯಾಗಿ ವಾಹನ ಲಾಕ್ ಆಗಿದೆ ಖಚಿತಪಡಿಸಿಕೊಂಡು ಜಾತ್ರೆಗೆ ತೆರಳುವಂತೆ ಸೂಚಿಸಿದ್ದಾರೆ.

Related posts

Leave a Reply

Your email address will not be published. Required fields are marked *