Header Ads
Breaking News

ಪುತ್ತೂರು ಪೊಲೀಸರಿಂದ ಅನಗತ್ಯ ಪೇಟೆಗೆ ಬರುವವರಿಗೆ ಎಚ್ಚರಿಕೆ

ಪುತ್ತೂರು: ಕೊರೋನ ಹರಡುವಿಕೆ ಹೆಚ್ಚಾಗಿದ್ದರೂ ಜನ ಇನ್ನೂ ಕ್ಯಾರೇ ಎನ್ನದೆ ಬೇಕಾ ಬಿಟ್ಟಿಯಾಗಿ ಪೇಟೆಗೆ ಬರುತ್ತಿರುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅನಗತ್ಯವಾಗಿ ಪೇಟೆಗೆ ಬರುವ ಜನರನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮೇ.6ರಿಂದ ಪುತ್ತೂರು ಪೇಟೆಯಲ್ಲಿ ಪೊಲೀಸರ ತಂಡ ಬ್ಯಾರಿಕೇಡ್ ಇಟ್ಟು ವಾಹನಗಳಲ್ಲಿ ಪೇಟೆಗೆ ಬರುವವರನ್ನು ವಿಚಾರಣೆ ನಡೆಸಲಿದೆ. ತರಕಾರಿ, ದಿನಸಿ ಮೆಡಿಕಲ್ ಸೇರಿದಂತೆ ಅಗತ್ಯ ಸೇವೆಯ ವಾಹನಗಳಿಗೆ ಮಾತ್ರ ಅವಕಾಶ. ಉಳಿದಂತೆ ಅನಗತ್ಯವಾಗಿ ಓಡಾಡುವ ವಾಹನಗಳ ಮಾಲಕರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಗೋಪಾಲ್ ನಾಯ್ಕ್ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *