Header Ads
Breaking News

ಪುತ್ತೂರು ರಸ್ತೆ ಬದಿಯ ಭಿಕ್ಷುಕರಿಗೆ ಬೆಡ್‍ಶೀಟ್, ಆಹಾರ ವಿತರಣೆ

E Friends India

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಎಲ್ಲಿಯ ತನಕ ಕೊರೋನಾ ಸೋಂಕಿತರು ದಾಖಲಾಗಿರುತ್ತಾರೋ ಅಲ್ಲಿಯ ತನಕ ನಿರಂತರ ಹಣ್ಣು ಹಂಪಲುಗಳನ್ನೊಳಗೊಂಡ ಪೌಷ್ಠಿಕ ಆಹಾರ ನೀಡುವಲ್ಲಿ ಕಳೆದ ವರ್ಷ ಆರಂಭಿಸಿದ ಪುತ್ತೂರಿನ ಇ ಫ್ರೆಂಡ್ಸ್ ಈ ವರ್ಷವು ಕೊರೋನಾ 2ನೇ ಅಲೆಯಲ್ಲೂ ಮುಂದುವರಿಸಿದ್ದು, ಶಾಸಕ ಸಂಜೀವ ಮಠಂದೂರು ಅವರ ಮೂಲಕ ಬೀದಿ ಬದಿಯ ಭಿಕ್ಷುಕರಿಗೆ ಬೆಡ್‍ಶೀಟ್ ಮತ್ತು ಆಹಾರ ಒದಗಿಸುವ ಕಾರ್ಯ ಮಾಡಲಾಯಿತು. E Friends India

ಶಾಸಕ ಸಂಜೀವ ಮಠಂದೂರು ಅವರು ಇ ಫ್ರೆಂಡ್ಸ್ ಇಂಡಿಯಾ ಕೊಡ ಮಾಡಿದ ಸೊತ್ತುಗಳನ್ನು ಭಿಕ್ಷುಕರಿಗೆ ವಿತರಿಸಿದರು. ಬಳಿಕ ಮಾತನಾಡಿ ಹಸಿದವನಿಗೆ ಅನ್ನ ಕೊಡುವುದು ದೊಡ್ಡ ಧರ್ಮ. ಅದೇ ರೀತಿ ಅನಾರೋಗ್ಯ ಪೀಡಿತರಿಗೆ ಮಾನವೀಯತೆ ನೆಲೆಯಲ್ಲಿ ಸಹಕಾರ ನೀಡುವಂತಹ ಮಹತ್ವದ ಸೇವೆಯನ್ನು ಇ ಫ್ರೆಂಡ್ಸ್ ತಂಡ ಮಾಡಿರುವುದು ಮಾದರಿ ಕೆಲಸವಾಗಿದೆ ಎಂದರು. E Friends India

ಈ ವೇಳೆ ಇ ಫ್ರೆಂಡ್ಸ್‍ನ ಅಧ್ಯಕ್ಷ ಡಾ. ಇಸ್ಮಾಯಿಲ್ ಸಫ್ರ್ರಾಝ್, ಶಾಸಕರ ವಾರ್ ರೂಮ್‍ನ ಪ್ರಮುಖ್ ಸಾಜ ರಾಧಾಕೃಷ್ಣ ಆಳ್ವ, ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಾಜೇಶ್ ಬನ್ನೂರು, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *