Header Ads
Breaking News

ಪುತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ : ಸೂಟೆಯ ಬೆಳಕಿನಲ್ಲೇ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಆಗಮನ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಎ.16ರಂದು ರಾತ್ರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳು ಕಿರುವಾಳು ಸೂಟೆಯ ಬೆಳಕಿನಲ್ಲಿ ಮಹಾಲಿಂಗೆಶ್ವರ ದೇವಸ್ಥಾನಕ್ಕೆ ಆಗಮನವಾಯಿತು.
ಸೂಟೆಯ ಬೆಳಕಿನಲ್ಲೇ ಬಲ್ನಾಡಿನಿಂದ ಶ್ರೀ ಮಹಾಲಿಂಗೇಶ್ವರ ದೇವರ ಕ್ಷೇತ್ರಕ್ಕೆ ಬಂದ ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರು ಜಾತ್ರೆಯಲ್ಲಿ ಪಾಲ್ಗೊಂಡರು. ಕಿರುವಾಳು ಮೆರವಣಿಗೆಯ ದಾರಿ ಮಧ್ಯದಲ್ಲಿ ಸಾಲಾಗಿ ಭಕ್ತರು ಆರತಿ ನೆರವೇರಿಸಿದರು.ಶ್ರೀ ಉಳ್ಳಾಲ್ತಿ ಅಮ್ಮನಿಗೆ ಮಲ್ಲಿಗೆಯ ರಾಶಿಯೇ ಭಕ್ತರು ಅರ್ಪಿಸಿ ಪ್ರಸಾದವನ್ನು ಸ್ವೀಕರಿಸಿದರು. ಅಲ್ಲಿಲ್ಲಿ ಮಲ್ಲಿಗೆಯನ್ನು ಮಾರಾಟ ಮಾಡುತ್ತಿರುವ ದ್ರಶ್ಯ ಕಂಡು ಬಂತು.
ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಆಗಮನವಾದ ಬಳಿಕ ರಾತ್ರಿ ವೈಭವದ ಉತ್ಸವ ನಡೆದು ಎ.17ರ ಬ್ರಾಹ್ಮೀಮುಹೂರ್ತದಲ್ಲಿ ಕೆರೆ ಆಯನ ನಡೆಯಿತು.
ಉಳ್ಳಾಲ್ತಿ ಕಿರುವಾಳು ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಪಾಲಕಿ ಉತ್ಸವದಲ್ಲಿ ಉಡಿಕೆ, ಚೆಂಡೆ, ವಾದ್ಯ, ಕೊಂಬು, ಶಂಖ, ಭಜನೆ ಸುತ್ತು ನಡೆಯಿತು.

ಬಳಿಕ ದೇವಳದ ಹೊರಾಂಗಣದಲ್ಲಿ ಹೂತೇರು, ಕೆರೆ ಆಯನ ನಡೆಯಿತು. ಶ್ರೀ ದೇವರು ಕೆರೆಯ ಮಧ್ಯದಲ್ಲಿರುವ ಮಂಟಪದಲ್ಲಿ ಕುಳಿತು ಪೂಜೆ ಸ್ವೀಕರಿಸಿದ ಬಳಿಕ ದೇವಳದ ಒಳಗೆ ಹೋಗುವ ಕಾರ್ಯಕ್ರಮ ನಡೆಯಿತು. ಕೋವಿಡ್ ನಿಯಮದ ಪ್ರಕಾರ ಎಲ್ಲಾ ಭಕ್ತರು ಮಾಸ್ಕ್ ಧರಿಸಿ ದೇವರ ದರ್ಶನ ಪಡೆದು ಪುನೀತರಾದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಯಿತು. ಇಂದು ಬೆಳಿಗ್ಗೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಬಲಿ ಮತ್ತು ರಾತ್ರಿ ಬ್ರಮ್ಮರಾಥೋಸ್ವಾವ, ವಿಶೇಷ ಪುತ್ತೂರು ಬೆಡಿ ನಡೆಯಲಿದೆ. ಪುತ್ತೂರು ಶಾಸಕರಾದ ಸಂಜೀವ ಮಠ0ದೂರು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮತ್ತು ಸದಸ್ಯರು, ಭಕ್ತದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *