Header Ads
Breaking News

ಪುತ್ತೂರು : ಸಮಗ್ರ ಘನ ತ್ಯಾಜ್ಯ ವಿಲೇವಾರಿ ಯೋಜನೆ ಅನುಷ್ಠಾನ

ಪುತ್ತೂರು ನಗರವನ್ನು ಇನ್ನಷ್ಟು ಸ್ವಚ್ಚ ಸುಂದರ ನಗರಸಭವನ್ನಾಗಿಸಲು ನಗರಸಭಾ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಪರಿತ್ಯಾಜ್ಯ ವಸ್ತುಗಳನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುವ ಹಿತದೃಷ್ಟಿಯಿಂದ ಪುತ್ತೂರು ನಗರ ಸಭೆ ಹಾಗು ರೋಟರಿ ಕ್ಲಬ್ ಪೂರ್ವ ಇದರ ಸಹಭಾಗಿತ್ವದಲ್ಲಿ ಪುತ್ತೂರು ನಗರ ಸಭೆಯ ವ್ಯಾಪ್ತಿಯ ನೆಕ್ಕಿಲ ಬನ್ನೂರಿನಲ್ಲಿ ಸಮಗ್ರ ಘನತ್ಯಾಜ್ಯ ವಿಲೇವಾರಿ ಯೋಜನೆಗೆ ಕೌನ್ಸಿಲ್ ಸಭೆಯ ಮಂಜೂರಾತಿಯನ್ನು ಪಡೆದು ನಂತರ ದಕ್ಷಿಣ ಕನ್ನಡ ಜಿಲ್ಲಾದಿಕಾರಿಗಳಿಂದ ಅನುಮೋದನೆಯನ್ನು ಪಡೆಯಲಾಗಿರುತ್ತದೆ. ಸುಮಾರು ರೂ 4.15 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ಈ ಯೋಜನೆಯ ಸಂಪೂರ್ಣ ಜವಾಬ್ದಾರಿ ರೋಟರಿ ಕ್ಲಬ್ ಪುತ್ತೂರು ಪೂರ್ವದ್ದಾಗಿರುತ್ತದೆ.
ಹಸಿ ತ್ಯಾಜ್ಯ, ಒಣ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸುವ ಸಮಗ್ರ ಯೋಜನೆ, ಇದಾಗಿದ್ದು, ತ್ಯಾಜ್ಯ ವಿಲೇವಾರಿಗೆ ಸಮಗ್ರ ಫಲಹಾರವಾಗಲಿದೆ. ಯೋಜನೆ ಒಟ್ಟು ಕಾಲಾವಧಿ 15 ವರ್ಷಗಳಾಗಿದ್ದು, ಈಗಾಗಲೇ ಪುತ್ತೂರು ನಗರ ಸಭೆ ಹಾಗೂ ರೋಟರಿ ಕ್ಲಬ್ ಪೂರ್ವ ಸಂಸ್ಥೆಯ ಮಧ್ಯೆ ಒಪ್ಪಂದ ಪತ್ರಕ್ಕೂ ಸಹಿ ಹಾಕಲಾಗಿದೆ. ಮುಂದಿನ 18 ತಿಂಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಪ್ರತಿ ದಿನ 20 ಟನ್ ಹಸಿ ತ್ಯಾಜ್ಯವನ್ನು ಜೈವಿಕ ಅನಿಲವಾಗಿ ಪರಿವರ್ತಿಸುವುದರೊಂದಿಗೆ ಅನುಬಂಧ ತ್ಯಾಜ್ಯಗಳನ್ನೂ ಸಂಸ್ಕರಿಸಲಾಗುವುದು . ಈ ಯೋಜನೆ ಅನುಷ್ಠಾನವಾದಾಗ ನಗರಸಭೆ ಮಾತ್ರವಲ್ಲ ಪರಿಸರದ ಸ್ಥಳೀಯಾಡಳಿತ ತ್ಯಾಜ್ಯ ಸಮಸ್ಯೆಗೂ ಪರಿಹಾರ ಲಭಿಸಲಿದೆ ಎಂದು ಸಂಜೀವ ಮಠಂದೂರು ಹೇಳಿದರು.

ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಪೌರಾಯುಕ್ತೆ ರೂಪಾ ಶೆಟ್ಟಿ, ರಾಜೇಶ್ ಬೆಜ್ಜಂಗಳ, ರೋಟರಿ ಪೂರ್ವ ಸದಸ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *