Header Ads
Breaking News

ಪುತ್ತೂರು: 108 ಕದಂಬ ವೃಕ್ಷಗಳಿಗೆ ನಾಮಾಕರಣ ಕಾರ್ಯಕ್ರಮ

ಸಾಮೆತ್ತಡ್ಕ-ಸೂತ್ರಬೆಟ್ಟು ಸಂಪರ್ಕ ರಸ್ತೆಯ ಅಶೋಕನಗರ ಎಂಬಲ್ಲಿ ಇರುವ ವೃಕ್ಷೋದ್ಯಾನವನದಲ್ಲಿ ಈಗಾಗಲೇ ಸೊಂಪಾಗಿ ಬೆಳೆದಿರುವ 108 ಕದಂಬ ವೃಕ್ಷಗಳಿಗೆ ವಿವಿಧ ಹೆಸರಿನಲ್ಲಿ ನಾಮಾಕರಣಗೊಳಿಸುವ ಕಾರ್ಯಕ್ರಮವು ಸರಳ ರೀತಿಯಲ್ಲಿ ಜರಗಿತು.

ಪುತ್ತೂರು ಉಪವಿಭಾಗದ ಉಪ ವಲಯ ಅರಣ್ಯಾಧಿಕಾರಿಗಳಾಗಿರುವ ಕಾರ್ಯಾಪ್ಪರವರು ಕದಂಬ ವೃಕ್ಷೋದ್ಯಾನವನದ ನಾಮಾಫಲಕವನ್ನು ಅನಾವರಣಗೊಳಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮರಗಳನ್ನು ಉಳಿಸಿಕೊಳ್ಳುವುದೇ ಕಷ್ಟ. ಈ ನಿಟ್ಟಿನಲ್ಲಿ ಈ ವೃಕ್ಷೋದ್ಯಾನವನದಲ್ಲಿ 108 ಕದಂಬ ಗಿಡಗಳನ್ನು ನೆಟ್ಟು ಪೋಷಿಸುತ್ತಿರುವುದು ಹೆಮ್ಮೆಯ ಸಂಗತಿ. ಕದಂಬ ಗಿಡಗಳು ಬಹಳ ಬೇಗನೇ ಬೆಳೆಯುವಂತಹ ಗಿಡಗಳಾಗಿದೆ ಮಾತ್ರವಲ್ಲ ಈ ಗಿಡಗಳಿಗೆ ಬಹಳ ಪ್ರಾಮುಖ್ಯತೆಯೂ ಇದೆ ಎಂದರು.

ಪುತ್ತೂರು ಲಯನ್ಸ್ ಕ್ಲಬ್‍ನ ಮಾಜಿ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿರವರು ಮಾತನಾಡಿ, ಇದೀಗ ಪಟ್ಟಣ ಪ್ರದೇಶಗಳಲ್ಲೂ ಮರಗಿಡಗಳ ಪೆÇೀಷಣೆ ಬಹಳ ಅಗತ್ಯವಿದೆ. ಪ್ರತಿಯೋರ್ವರು ತಮ್ಮ ಮನೆಯಂಗಳದಲ್ಲಿ ಕನಿಷ್ಟ ಒಂದೊಂದು ಗಿಡಗಳನ್ನು ನೆಟ್ಟು ಪರಿಸರವನ್ನು ಉಳಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.

ಪುತ್ತೂರು ಉಪ ವಿಭಾಗದ ನಿವೃತ್ತ ಡಿಎಫ್‍ಒ ಆಗಿರುವ ದಿವಾಕರ್ ಕೆ.ಪಿ,ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಪದ್ಮನಾಭ, ಸಾಮೆತ್ತಡ್ಕ ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಉದ್ಯಮಿ ಸೂರಜ್ ಶೆಟ್ಟಿ ಸಾಮೆತ್ತಡ್ಕ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *