Header Ads
Breaking News

ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನಿಗೆ ಮರುಜೀವನ

ಪುತ್ತೂರು: ಗುಜರಾತಿನಲ್ಲಿ ಪ್ರೇಯಸಿ ಕೈ ಕೊಟ್ಟಳೆಂದು ಮನನೊಂದು ಊರೂರು ಅಲೆದು ಕೊನೆಗೆ ಪುತ್ತೂರಿಗೆ ಆಗಮಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೋರ್ವನಿಗೆ ಪುತ್ತೂರು ಶಾಸಕರ ವಾರ್‍ರೂಮ್ ಮೂಲಕ ಕೌನ್ಸಿಲಿಂಗ್ ನಡೆಸಿ, ಊಟೋಪಚಾರ ಮಾಡಿಸಿ ಮರು ಜೀವನದ ಮಾರ್ಗ ತೋರಿಸಿದ ಘಟನೆ ನಡೆದಿದೆ.vishwa hindu parishath help

ಮೈಸೂರು ಮೂಲದವರಾಗಿದ್ದು ಕಳೆದ ಹಲವಾರು ವರ್ಷಗಳಿಂದ ಗುಜರಾತ್‍ನ ಹೊಟೇಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದ ನಂದೀಶ್ ಎಂಬವರೇ ಆತ್ಮಹತ್ಯೆಗೆ ಪ್ರಯತ್ನಿಸಿದವರು. ಅವರು ಕಬಕ ಸಮೀಪದ ಪೋಳ್ಯ ತಿರುವಿನಲ್ಲಿ ರಸ್ತೆ ಬದಿ ಬಿದ್ದಿರುವುದನ್ನು ನಾಗರಾಜ್ ಮಿತ್ತೂರು ಎಂಬವರು ಗಮನಿಸಿ ಪುತ್ತೂರು ಬಿಜೆಪಿ ಕಚೇರಿಯ ಬಳಿ ಕರೆ ತಂದಿದ್ದರು. ಅಲ್ಲಿ ಶಾಸಕರ ವಾರ್‍ರೂಮ್ ಮೂಲಕ ನಂದೀಶ್ ಅವರಿಗೆ ಮೊದಲು ತಿಂಡಿ ನೀರು ಕೊಟ್ಟು ಬಳಿಕ ವಿಚಾರಿಸಿದಾಗ ಸರಿಯಾಗಿ ಉತ್ತರಿಸದೇ ಇರುವುದನ್ನು ಗಮನಿಸಿ ವಿಶ್ವಹಿಂದೂ ಪರಿಷತ್ ಕಾರ್ಯಾಲಯಲ್ಲಿ ಆಶ್ರಯ ನೀಡಲಾಯಿತು.


ಈ ವೇಳೆ ಶಾಸಕರ ವಾರ್ ರೂಮ್‍ನ ಸದಸ್ಯರು ಮತ್ತು ವಿಶ್ವಹಿಂದೂ ಪರಿಷದ್, ಬಜರಂಗದಳ ನಾಯಕರು ನಂದೀಶ್ ಅವರಿಗೆ ಕೌನ್ಸಿಲಿಂಗ್ ಮಾಡಿದರು. ನಂತರ ಅವರಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ಕೊಡಿಸಿ ಊಟೋಪಚಾರದ ವ್ಯವಸ್ಥೆ ಮಾಡಿದರು. ಈ ವೇಳೆ ನಂದೀಶ್ ನಾನು ಪುನಃ ಗುಜರಾತಿಗೆ ಹೋಗಬೇಕು ಎಂದು ಅವಲತ್ತುಕೊಂಡರು.ಶಾಸಕರ ವಾರ್ ರೂಮ್ ಮೂಲಕ ಆತನನ್ನು ಗುಜರಾತಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವ ಕುರಿತು ತೀರ್ಮಾನಿಸಲಾಯಿತು.

Related posts

Leave a Reply

Your email address will not be published. Required fields are marked *