Header Ads
Breaking News

ಪುತ್ತೂರಿನಲ್ಲಿ ಕೋವಿಡ್-19 ಪ್ರಗತಿ ಪರಿಶೀಲನಾ ಸಭೆ

ಕೋವಿಡ್  ಸೋಂಕಿತರ ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕಿತರು ನೀಡಿದ ರಾಂಗ್ ಮೊಬೈಲ್ ನಂಬರ್‍ನಿಂದಾಗಿ ಕೋವಿಡ್ ಸಂಪರ್ಕಿತರ ಕಾಂಟೆಕ್ಟ್ ಟ್ರೇಸ್ ಮಾಡುವಲ್ಲಿ ನಗರಸಭೆ ಮತ್ತು ಆಶಾ ಕಾರ್ಯಕರ್ತರು ಹರಸಾಹಸ ಪಡುವ ಘಟನೆಯೊಂದು ಬೆಳಕಿಗೆ ಬಂದಿದೆ. ಎμÉ್ಟೂೀ ಕೋವಿಡ್ ಸೋಂಕಿತರ ಸೆಕೆಂಡರಿ ಸಂಪರ್ಕಿತರು ಮೊಬೈಲ್ ಸಂಖ್ಯೆಯನ್ನು ತಪ್ಪಾಗಿ ನೀಡುತ್ತಿದ್ದಾರೋ ಅಥವಾ ನೋಂದಾವಣೆಯಲ್ಲಿ ಎಡವಟ್ಟಾಗಿದೆಯೋ ಎಂಬುದು ಪರಿಶೀಲಿಸಬೇಕಾಗಿದೆ.

ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರದ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಜಿಲ್ಲಾಡಳಿತದಿಂದ ಪ್ರತಿಯೊಬ್ಬ ಕೋವಿಡ್ ಸೋಂಕಿತನಿಗೆ 30 ಮಂದಿಯ ಕೋವಿಡ್ ಪ್ರಾಥಮಿಕ ಸಂಪರ್ಕಿತರ ಪಟ್ಟಿ ಕೋಡಬೇಕು. ಒಂದೆ ಮನೆಯಲ್ಲಿ ಕೇವಲ 5 ಮಂದಿ ಇದ್ದರೆ ಅಲ್ಲಿ ಉಳಿದ 25 ಮಂದಿಯ ಸಂಪರ್ಕವನ್ನು ಕೊಡುವುದು ಹೇಗೆ ಎಂಬ ಪ್ರಶ್ನೆ ಇಲ್ಲಿ ಕಾಡುತ್ತದೆ. ಹಾಗಾಗಿ ಸೋಂಕಿತರ ಮನೆಯ ಅಕ್ಕಪಕ್ಕದ ಮೊಬೈಲ್ ನಂಬರ್ ಕೊಡುವಲ್ಲಿ ಎಡವಟ್ಟಾಗಿರಬಹುದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.covid sabhe

ಸಭೆಯಲ್ಲಿ ನಗರಸಭೆ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಶಬರೀನಾಥ್ ರೈ, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಆಶಾ ಕಾರ್ಯಕರ್ತೆಯರು, ಶಿಕ್ಷಕರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *