Header Ads
Breaking News

ಸೂರಿಕುಮೇರು : 23 ವರ್ಷಗಳ ರಸ್ತೆ ವಿವಾದಕ್ಕೆ ತೆರೆ ಎಳೆದ ಸಾಮಾಜಿಕ ನಾಯಕರು

ಕಳೆದ 23 ವರ್ಷಗಳಿಂದ ಸೂರಿಕುಮೇರು ಚರ್ಚ್ ಆಡಳಿತ ಮಂಡಳಿ ಮತ್ತು ಸೂರಿಕುಮೇರು ಉದ್ಯಮಿ ಸುಲೈಮಾನ್ ನಡುವೆ ಖಾಸಗಿ ಮನೆಗೆ ರಸ್ತೆಯೊಂದರ ವಿಷಯದಲ್ಲಿ ವಿವಾದಗಳು ನಡೆಯುತ್ತಿದ್ದವು.

ಹಲವಾರು ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಗಣ್ಯರು ಮಾತುಕತೆಗೆ ಪ್ರಯತ್ನ ನಡೆಸಿದರೂ ರಸ್ತೆ ವಿವಾದಕ್ಕೆ ಪರಿಹಾರ ದೊರಕುತಿರಲಿಲ್ಲ. ಇದೀಗ ಸೂರಿಕುಮೇರು ಚರ್ಚ್ ನ ವಂದನೀಯ ಫಾದರ್ ಗ್ರೆಗರಿ ಪಿರೇರಾ ಸಮ್ಮುಖದಲ್ಲಿ ನಡೆದ ರಾಜಿ ಸಂಧಾನ ಮಾತುಕತೆಯಲ್ಲಿ ತುಳು ಚಿತ್ರನಟ ಚೇತನ್ ರೈ ಮಾಣಿ, ಸೂರಿಕುಮೇರು ಚರ್ಚ್ ಮುಖ್ಯಸ್ಥ ರೋಷನ್ ಬೊನಿಫಾಸ್ ಮಾರ್ಟಿಸ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುದೀಪ್ ಶೆಟ್ಟಿ, ಎಸ್ಡಿಪಿಐ ಮಾಜಿ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಯುವ ನಾಯಕ ಹನೀಫ್ ಸಂಕ ಮತ್ತು ವಿಟ್ಲ ಠಾಣಾಧಿಕಾರಿ ವಿನೋದ್ ರೆಡ್ಡಿ ಸಹಕಾರದೊಂದಿಗೆ ರಸ್ತೆ ವಿವಾದ ಇತ್ಯರ್ಥಗೊಂಡು ಸುಲೈಮಾನ್ ರವರ ಮನೆಗೆ ರಸ್ತೆ ಮಾಡುವುದರ ಮೂಲಕ ಸಮಸ್ಸೆ ಬಗೆಹರಿಸಲಾಗಿದೆ.
23 ವರ್ಷಗಳಲ್ಲಿ ಮುಗಿಯದ ಸಮಸ್ಯೆಯೊಂದನ್ನು ಮುತುವರ್ಜಿಯಿಂದ ಬಗೆಹರಿಸಿದ ಎಲ್ಲಾ ಗಣ್ಯರಿಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗಿದೆ ಮತ್ತು ಸುಲೈಮಾನ್ ರವರು ಸೂರಿಕುಮೇರು ಚರ್ಚ್ ನ ಧರ್ಮ ಗುರುಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

Related posts

Leave a Reply

Your email address will not be published. Required fields are marked *