Header Ads
Breaking News

ಪೌರ ಕಾರ್ಮಿಕರ ಆರೋಗ್ಯಕ್ಕೆ ಸಹಕರಿಸಿ : ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಮನವಿ

 ಮನೆಗಳು ಹಾಗೂ ವಸತಿ ಸಮುಚ್ಚಯಗಳಿಂದ ಉತ್ಪತ್ತಿಯಾಗುವ ಕಸವನ್ನು ಮೂಲದಿಂದಲೇ ಹಸಿ ಹಾಗೂ ಒಣ ಕಸವಾಗಿ ವಿಂಗಡಿಸಿ ಕಸದ ವಾಹನಗಳಿಗೆ ನೀಡುವ ಮೂಲಕ ಪೌರ ಕಾರ್ಮಿಕರ ಆರೋಗ್ಯಕ್ಕೆ ಸಹಕರಿಸಿ ಎಂದು ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಮನವಿ ಮಾಡಿದ್ದಾರೆ. 

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಒಣ ಹಾಗೂ ಹಸಿ ಕಸ ಬೇರ್ಪಡಿaಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕುರಿತಂತೆ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ. ಆದರೆ ಕೆಲವರು ಇನ್ನೂ ಈ ಬಗ್ಗೆ ಗಮನಹರಿಸಿಲ್ಲ ಎಂದು ಅವರು ಹೇಳಿದರು. ಮೂಲದಲ್ಲಿಯೇ ತ್ಯಾಜ್ಯ ಬೇರ್ಪಡಿಸಿ ನೀಡಿದ್ದಲ್ಲಿ ಪಚ್ಚನಾಡಿ ಲ್ಯಾಂಡ್‍ಫಿಲ್- ಮಂದಾರ ಬೈಲ್ ಪ್ರದೇಶದಲ್ಲಿ ನಡೆದ ಭೂ ಕುಸಿತದಂತಹ ದುರ್ಘನೆಯನ್ನು ತಡೆಗಟ್ಟಬಹುದು. ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಬಹುತೇಕರು ಹೋಂ ಐಸೋಲೇಶನ್‍ನಲ್ಲಿರುವುದರಿಂದ ಕಸ ಪ್ರತ್ಯೇಕಿಸದೆ ನೀಡಿದ್ದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕಸ ವಿಂಗಡಿಸುವ ಕರ್ತವ್ಯ ನಿರ್ವಹಿಸುವ ಕಾರ್ಮಿಕರು ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.

ಮನೆಗಳಲ್ಲಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಕರು ತಮ್ಮ ಹಂತದಲ್ಲಿಯೇ ಕಾಂಪೊಸ್ಟಿಗ್ ಘಟಕವನ್ನು ಅಳವಡಿಸಿಕೊಂಡಲ್ಲಿ ಆಸ್ತಿ ತೆರಿಗೆಯ ಘನತ್ಯಾಜ್ಯ ಕರದಲ್ಲಿ ಶೇ.50ರಷ್ಟು ವಿನಾಯಿತಿ ನೀಡುವ ಮೂಲಕ ಪ್ರೊತ್ಸಾಹಿಸಲಾಗುತ್ತಿದೆ. ಕಸ ವಿಲೇವಾರಿಗೆ ಸಂಬಂಧಿಸಿ ಯಾವುದೇ ದೂರುಗಳು ಇದ್ದಲ್ಲಿ ಟೋಲ್‍ಫ್ರೀ ನಂ. 155313 ಅಥವಾ ಮೊಬೈಲ್ ನಂಬರ್ 9449007722ಗೆ ವಾಟ್ಸಾಪ್ ಮೂಲಕ ಸ್ಥಳದ ವಿವರದೊಂದಿಗೆ ದೂರು ಸಲ್ಲಿಸಬಹುದು ಎಂದು ಮೇಯರ್ ತಿಳಿಸಿದರು.ಉಪ ಮೇಯರ್ ಸುಮಂಗಲಾ ರಾವ್, ಜಂಟಿ ಆಯುಕ್ತ ಡಾ.ಸಂತೋಷ್ ಕುಮಾರ್, ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *