Header Ads
Breaking News

ಪ್ರಚಾರಕ್ಕಾಗಿ ಕಥೆ ಹೇಳುವ ಬದಲು ಫೀಲ್ಡ್‍ಗಿಳಿದು ಕೆಲಸ ಮಾಡಿ- ಎಂ.ಬಿ ಪಾಟೀಲ್

m b patil

ರಾಜ್ಯದಲ್ಲಿ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಮತ್ತು ಸಚಿವರು ಟಿವಿಯಲ್ಲಿ ಸ್ಟೇಟ್ ಮೆಂಟ್ ಕೊಡುವ ಮೂಲಕ, ಫ್ಯೂಚರ್ ಟೆನ್ಸ್‍ನಲ್ಲಿ ಮಾತನಾಡುವುದು ಬೇಡ. ರೆಮಿಡಿಸಿವರ್, ಆಕ್ಸಿಜನ್ ಬರ್ತಿದೆ, ಇಷ್ಟು ಎಂಜೆಕ್ಷನ್ ಆರ್ಡರ್ ಮಾಡಿದ್ದೇವೆ ಎಂದು ಹೇಳುತ್ತಾ ಕೂಡಬೇಡಿ. ಅವು ಬರುವಷ್ಟರಲ್ಲಿ ಸಾಕಷ್ಟು ಅನಾಹುತವಾಗುತ್ತಿವೆ. ಈಗಾಗಲೇ ಅನಾಹುತಗಳು ಆಗಿವೆ. ಇದು ಪ್ರಚಾರದ ಸಂದರ್ಭವಲ್ಲ. ಹೇಳಿಕೆ ನೀಡುವ ಸಮಯವಲ್ಲ. ಇದು ಯುದ್ಧದ ಸಮಯ. ಸಮರೋಪಾದಿಯಲ್ಲಿ ಕೆಲಸ ಮಾಡಿ. ಕಥೆ ಹೇಳುವ ಬದಲು ಫೀಲ್ಡಿಗಿಳಿದು ಕೆಲಸ ಮಾಡಿ ಎಂದು ಸರಕಾರಕ್ಕೆ ಕಿವಿಮಾತು ಹೇಳಿದರು.

Related posts

Leave a Reply

Your email address will not be published. Required fields are marked *