Header Ads
Breaking News

ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ : ವೈದ್ಯಕೀಯ ಚಿಕಿತ್ಸೆಗೆ ನೆರವಿನ ಹಸ್ತ

Friends Bellalbag Birruver Kudla

ಮಂಗಳೂರಿನ ನಿವಾಸಿಯೋರ್ವರಿಗೆ ನೀರಜಾಕ್ಷಿ ಅವರ ಕಿಡ್ನಿ ಸಮಸ್ಯೆಯ ವೈದ್ಯಕೀಯ ಚಿಕಿತ್ಸೆಗೆ ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ ಸಂಘಟನೆ 50ಸಾವಿರ ರೂ ನೆರವಿನ ಹಸ್ತ ಚಾಚಿದೆ. ಇಂದು ಮಂಗಳೂರಿನ ಕುದ್ರೋಳಿ ದೇವಾಸ್ಥಾನದಲ್ಲಿ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ನೀರಜಾಕ್ಷಿ ಅವ್ರಿಗೆ ಚೆಕ್ ಅನ್ನು ಹಸ್ತಾಂತರಿಸಿದ್ರು. ಈ ವೇಳೆ ಮಾತನಾಡಿದ ಶಾಸಕರು, ಕಳೆದ ಆರು ವರ್ಷಗಳಲ್ಲಿ ಜಾತಿ ಬೇದವಿಲ್ಲದೆ ನೂರಾರು ಕುಟುಂಬಗಳಿಗೆ ದಾನಿಗಳ ನೆರವಿನಿಂದ ಬೃಹತ್ ಮೊತ್ತದ ಆರ್ಥಿಕ ನೆರವು ನೀಡುವ ಮೂಲಕ ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ ಸಂಘಟನೆ ಬಾಂಧವ್ಯ ಬೆಸೆಯುವ ಕೆಲಸದೊಂದಿಗೆ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಅವರು ಹೇಳಿದರು. Friends Bellalbag Birruver Kudla

ಈ ವೇಳೆ ದೇವಸ್ಥಾನದ ಆಡಳಿತ ಮೊಕ್ತೇಸರ ಸಾಯಿರಾಂ,ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ಬಾಗ್, ವಸಂತ ಪೂಜಾರಿ, ಜಗದೀಪ್ ಸುವರ್ಣ, ರಾಕೇಶ್ ಪೂಜಾರಿ ಬಳ್ಳಾಲ್ ಭಾಗ್, ಶೇಖರ್ ಪೂಜಾರಿ, ರಾಕೇಶ್ ಸಾಲ್ಯಾನ್ ಚಿಲಿಂಬಿ, ಲೋಹಿತ್ ಗಟ್ಟಿ,ಕಿಶೋರ್ ಬಾಬು,ರಾಮ್ ಪ್ರಸಾದ್ ಎಕ್ಕೂರು,ಲಕ್ಷ್ಮೀಶ್ ಸುವರ್ಣ, ರೋಶನ್ ಮಿನೇಜಸ್,ಪ್ರಾಣೇಶ್ ಬಂಗೇರ,ದಿನಿಲ್ ಬಳ್ಳಾಲ್ ಭಾಗ್,ಗಣೇಶ್ ಚಿಲಿಂಬಿ, ಕಿರಣ್ ಉರ್ವ,ಯಶ್ವಿನ್ ಬಳ್ಳಾಲ್ ಭಾಗ್,ದೀರಜ್ ಚಿಲಿಂಬಿ,ಚೇತನ್ ರಾಜ್ ಗೌಡ, ಸುಶಾನ್ ಬಳ್ಳಾಲ್ ಭಾಗ್, ರಕ್ಷಣ್ ಬಳ್ಳಾಲ್ ಭಾಗ್, ಸುನೀಲ್ ಶೆಟ್ಟಿ ಬಳ್ಳಾಲ್ ಭಾಗ್, ಓಸ್ವಾಲ್ಡ್ ಡಿಸೋಜ, ರಕ್ಷಿತ್ ಬಿರ್ವ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *