Header Ads
Breaking News

ಉದ್ಯಮಿ ಮಹಿಬೂಬ್ ಆರ್ ತಂಬೋಳಿ ಅವರಿಂದ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಕೋವಿಡ್ – 19 ಎರಡನೇ ಅಲೆ ಹಿನ್ನಲೆ ಕೊಲಿ ಕಾರ್ಮಿಕ ವರ್ಗದ 10 ಸಾವಿರ ಬಡ ಜನತೆಯನ್ನು ಗುರುತಿಸಿ ದಿನಸಿ ಕಿಟ್ ನೀಡಲು ಉದ್ಯಮಿ ಮಹಿಬೂಬ್ ಆರ್ ತಾಂಬೋಳಿ ಮುಂದಾಗಿದ್ದಾರೆ. ಈ ಕುರಿತು ಪಟ್ಟಣದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ಬಡ ಜನತೆಯನ್ನು ಗುರುತಿಸಿ ಈಗ 10 ಸಾವಿರ ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ ಇದ್ದಕ್ಕೂ ಹೆಚ್ಚಿನ ಜನತೆ ಬಂದರೂ ಸಹಾಯ ಹಸ್ತ ನೀಡಲು ನಾನು ಸಿದ್ಧನಿದ್ದೇನೆ. ಈ ಕಾರ್ಯವು ಕಳೆದ ವರ್ಷದ ಲಾಕ್ ಡೌನ್ ನಿಂದಲೂ ಮಾಡುತ್ತಾ ಬಂದಿರುವೆ ಇದಲ್ಲದೆ ಆಕ್ಸಿಜನ್ ಕೊರತೆ ಇದ್ದವರು ಕೂಡ ನಮ್ಮನ್ನು ಸಂಪರ್ಕಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ ದಸ್ತಗೀರ ಮುಲ್ಲಾ ಕೋವಿಡ್ ನಿಯಂತ್ರಣದಲ್ಲಿ ತಾಲೂಕು ಆಡಳಿತ ಸೇರಿದಂತೆ ಜನ ಪ್ರತಿನಿಧಿಗಳು ವಿಫಲರಾಗಿದ್ದಾರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದು ಅದೇ ಪಕ್ಷದ ಓರ್ವ ಎಂ ಎಲ್ ಸಿ ಅರುಣ ಶಹಾಪುರ ಮತ್ತು ಲಿಂಬೆ ನಿಗಮ ಮಂಡಳಿ ಯ ಅಧ್ಯಕ್ಷ ಅಶೋಕ ಅಲ್ಲಾಪೂರ ಮತ್ತು ಮಾಜಿ ಶಾಸಕ ರಮೇಶ ಭೂಸನೂರ ನಮ್ಮ ಕ್ಷೇತ್ರದವರಾಗಿದ್ದು ಸರ್ಕಾರಕ್ಕೆ ಒತ್ತಡ ಹೇರಿ ಸಾರ್ವಜನಿಕರಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಬಹುದಾಗಿತ್ತು ಎಂದರು.

Related posts

Leave a Reply

Your email address will not be published. Required fields are marked *