Header Ads
Breaking News

ಬಸವನ ಬಾಗೇವಾಡಿಯಲ್ಲಿ ಬಾಲಕಿಯರ ಹತ್ಯೆ ಪ್ರಕರಣ : ಪರಿಹಾರ ಚೆಕ್ ವಿತರಣೆ

ಬಸವನಬಾಗೇವಾಡಿ ತಾಲ್ಲೂಕಿನ ಇಬ್ಬರು ಬಾಲಕಿಯರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಬಾಲಕಿಯರ ಕುಟುಂಬದವರಿಗೆ ನ್ಯಾಯ ಕೊಡುವ ಭರವಸೆಯನ್ನು ಅಲ್ಲಿನ ಶಾಸಕರು ನೀಡಿದ್ದಾರೆ. ಇನ್ನು ಮೃತ ಬಾಲಕಿಯರ ಪಾಲಕರಿಗೆ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಿದ ಪರಿಹಾರದ ಚೆಕ್ ಅನ್ನು ಶಾಸಕ ಸೋಮನಗೌಡ ಪಾಟೀಲ ಅವರು ವಿತರಿಸಿದರು.ನಂತರ ಮಾತನಾಡಿದ ಶಾಸಕ ಸೋಮನಗೌಡ ಪಾಟೀಲ, ‘ಬಾಲಕಿಯರ ಹತ್ಯೆ ನಡೆದಿರುವುದು ಅತೀವ ನೋವು ತಂದಿದೆ. ಅವರ ಕುಟುಂಬಗಳಿಗೆ ಯಾವುದೇ ರೀತಿ ಅನ್ಯಾಯವಾಗದಂತೆ ಜಿಲ್ಲಾ ಪೆÇಲೀಸರು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು. ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ ಮಾತನಾಡಿ, ‘ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಿ, ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗುವುದು’ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ತಹಶೀಲ್ದಾರ್ ಎಂ.ಎನ್.ಬಳಿಗಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪುಂಡಲೀಕ ಮಾನವರ ಮೊದಲಾದವರು ಹಾಜರಿದ್ದರು.

 

Related posts

Leave a Reply

Your email address will not be published. Required fields are marked *