Header Ads
Breaking News

ಬಾಲಕಿಗೆ ಕಿರುಕುಳ : ವ್ಯಕ್ತಿಗೆ ಧರ್ಮದೇಟು

 

ಬಾಲಕಿಗೆ ಚುಡಾಯಿಸಿದ ಹಿನ್ನೆಲೆ ವ್ಯಕ್ತಿಯೊಬ್ಬರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಹಾಸನ ನಗರದ ಕರಿಗೌಡ ಬಡಾವಣೆಯಲ್ಲಿ ನಡೆದಿದೆ.
ಹಾಸನದಲ್ಲಿ ಬೆಳಗ್ಗೆ ಎಂದಿನಂತೆ ಬಾಲಕಿ ಶಾಲೆಗೆ ಹೋಗಲು ಹೊಸ ಬಸ್ ನಿಲ್ದಾಣದ ಮೂಲಕ ಸೈಕಲ್‍ನಲ್ಲಿ, ಹಾಸನದ ಕರೀಗೌಡ ಬಡಾವಣೆಯ ಮೂಲಕ ಶಾಲೆಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ವ್ಯಕ್ತಿ ಆಕೆಯನ್ನು ಎಳೆದಾಡಿ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾನೆ. ನಂತರ ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿ ಧರ್ಮದೇಟು ಕೊಟ್ಟಿದ್ದಾರೆ. ಆಲೂರು ತಾಲೂಕಿನ ಧರ್ಮಪುರಿ ಹೊಸೂರು ಗ್ರಾಮದ ಕುಮಾರ್ ಅಲಿಯಾಸ್ ಗಂಗಾಧರ ಆರೋಪಿ. ಸ್ಥಳೀಯರು ಆರೋಪಿಗೆ ಸಖತ್ ಗೂಸಾ ನೀಡಿದ್ದು, ಕೊನೆಗೆ ಬಡಾವಣೆ ಠಾಣೆ ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Related posts

Leave a Reply

Your email address will not be published. Required fields are marked *