Header Ads
Breaking News

ಬಿಜೆಪಿಯವರ ಬಾಲಿಶ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸುತ್ತದೆ : ಮನಪಾ ವಿಪಕ್ಷ ನಾಯಕ ಎ.ಸಿ. ವಿನಯರಾಜ್ ಹೇಳಿಕೆ

ಬಿಜೆಪಿಯವರು ತಮ್ಮ ಅಸಮರ್ಥತೆಯನ್ನು ಮರೆಮಾಚಲು ಕಾಂಗ್ರೆಸ್ ಪಕ್ಷ ಕೊರೋನಾ ಲಸಿಕೆಯು ಬಿಜೆಪಿ ಲಸಿಕೆ ಎಂದು ಹೇಳಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿದ ಕಾರಣ ಲಸಿಕೆ ಪಡೆಯುವಲ್ಲಿ ಜನರು ಹಿಂದೇಟು ಹಾಕಿದ್ದರು ಎಂಬ ಬಾಲಿಶ ಹೇಳಿಕೆ ನೀಡಿದ್ದು, ಈ ಆರೋಪವನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಮಂಗಳೂರು ಪಾಲಿಕೆಯ ವಿರೋಧ ಪಕ್ಷದ ನಾಯಕ ಎ.ಸಿ. ವಿನಯರಾಜ್ ಹೇಳಿದರು.

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸರಕಾರ ಲಸಿಕೆ ನೀಡಿರುವುದು ದೇಶವಾಸಿಗಳು ಕಟ್ಟಿದ ತೆರಿಗೆಯ ಹಣದಿಂದ ಅಲ್ಲದೆ, ಬಿಜೆಪಿ ಪಕ್ಷದ ಆದಾಯದಿಂದಲ್ಲ. ಈ ರೀತಿ ಹೇಳಿಕೆ ನೀಡುವುದರ ಮೂಲಕ ಲಸಿಕೆಯನ್ನು ಬಿಜೆಪಿ ಉಚಿತವಾಗಿ ಕೊಡುತ್ತಿದೆ ಎನ್ನುವ ತಪ್ಪು ಸಂದೇಶವನ್ನು ನೀಡಲು ವೇದವ್ಯಾಸ್ ಕಾಮತ್ ರವರು ಶ್ರಮಿಸುತ್ತಿದ್ದಾರೆ ಹಾಗೂ ಲಸಿಕೆ ತೆಗೆದುಕೊಂಡ ಜನರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ತಾನೇ ಕೊಡಿಸಿದ್ದಾಗಿ ಹೇಳಿ ರಾಜಕೀಯ ಮಾಡುತ್ತಿದ್ದಾರೆ ಎಂದರು. ಜನರ ಜೀವ ಉಳಿಸಬೇಕಾದಲ್ಲಿ ದೇಶದಾದ್ಯಂತ ಜನರಿಗೆ ಲಸಿಕೆ ನೀಡುವುದು ಒಂದೇ ಪರಿಹಾರ.ಆದ್ದರಿಂದ ಎಲ್ಲರಿಗೂ ಉಚಿತ ಲಸಿಕೆ ನೀಡಬೇಕೆಂದು ಪ್ರಥಮವಾಗಿ ಕೇಂದ್ರ ಸರ್ಕಾರಕ್ಕೆ ಆಗ್ರಹ ಮಾಡಿದ್ದು ರಾಹುಲ್ ಗಾಂಧೀಜಿಯವರು. ಆದರೆ, ಕೇಂದ್ರ ಸರ್ಕಾರ ಇದನ್ನು ಪರಿಗಣಿಸದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದೀಜಿಯವರ ವರ್ಚಸ್ಸು ಹೆಚ್ಚಿಸಬೇಕೆಂದು ನಮ್ಮ ದೇಶದಲ್ಲಿ ಉತ್ಪಾದಿಸಲ್ಪಟ್ಟ ಆರೂವರೆ ಕೋಟಿ ಲಸಿಕೆಯನ್ನು ವಿದೇಶಗಳಿಗೆ ಮಾರಾಟ ಮಾಡಿರುತ್ತಾರೆ ಎಂದು ಹೇಳಿದರು.

ಇನ್ನು ಕೊರೋನಾ ರೋಗಿಗಳ ಕುಟುಂಬದ ಸದಸ್ಯರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಹೊರಗಡೆ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಸ್ನಾನಗೃಹ, ವಿಶ್ರಾಂತಿ ಪಡೆಯುವ ಕೋಣೆ ಹಾಗೂ ಹೊಟೇಲ್-ಕ್ಯಾಂಟೀನ್ ಗಳಿಲ್ಲದೆ ಕಷ್ಟಪಡುತ್ತಿದ್ದಾರೆ. ಅವರಿಗೆ ಜಿಲ್ಲಾಡಳಿತ ತಕ್ಷಣ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕ್ರಮವಹಿಸಬೇಕಾಗಿದೆ. ಇದು ವೇದವ್ಯಾಸ್ ಕಾಮತರ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು.

ಮುಂಗಾರು ಮಳೆ ಸಮೀಪಿಸುತ್ತಿದ್ದು, ಮಲೆರಿಯಾ ಹಾಗೂ ಡೆಂಗ್ಯೂ ಜ್ವರ ಹೆಚ್ಚಲು ಅವಕಾವಿದ್ದು, ಕೂಡಲೇ ಅದನ್ನು ತಡೆಗಟ್ಟುವುದು ಹಾಗೂ ನಿಭಾಯಿಸುವ ಕುರಿತು ಮಹಾನಗರ ಪಾಲಿಕೆ ಕೂಡಲೇ ಕ್ರಮವಹಿಸಬೇಕಾಗಿದೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *