Header Ads
Breaking News

ಬಿರುಸುಗೊಂಡ ಪಡುಬಿದ್ರಿ ವ್ಯಾಪ್ತಿಯಲ್ಲಿರುವ ಕಡಲು-ಅಪಾಯದಂಚಿನಲ್ಲಿ ಕಾಡಿಪಟ್ಣ ಪ್ರದೇಶ..

ಕಡಲ ತಡೆಗೋಡೆ ಕಾಮಗಾರಿ ಅರೆಬರೆಯಾಗಿ ನಡೆಸಿದ ಪರಿಣಾಮ ಕಾಡಿಪಟ್ಣ ಭಾಗದಲ್ಲಿ ಸಮುದ್ರ ಹಾಗೂ ನದಿ ಒಂದಾಗುವ ಸಾಧ್ಯತೆ ಇದ್ದು, ಇದೇನಾದರೂ ನಡೆದು ಹೋದರೆ ಸುಮಾರು ಮುನ್ನೂರಷ್ಟಿದ್ದ ಕಾಡಿಪಟ್ಣ ಪ್ರದೇಶ ನಾಶವಾಗುವುದರಲ್ಲಿ ಸಂಶಯವಿಲ್ಲ. ಇಂಥಹ ಅಪಾಯಕಾರಿ ಸ್ಥಿತಿಯಲ್ಲಿ ನಾವಿದ್ದರೂ ಈ ಭಾಗದ ಜನಪ್ರತಿನಿಧಿಗಳು ಈವರಗೆ ಭೇಟಿ ನೀಡುವ ಸೌಜನ್ಯವನ್ನೂ ತೋರಿಲ್ಲ ಎಂಬುದಾಗಿ ಮೀನುಗಾರ ಮುಖಂಡ ಅಶೋಕ ಸಾಲ್ಯಾನ್ ಆರೋಪಿಸಿದ್ದಾರೆ.
ಕಳೆದ ಬಾರಿಯ ಕಡಲು ಕೊರೆತ ಸಂದರ್ಭ ಈ ಭಾಗದಲ್ಲಿ ತುರ್ತಾಗಿ ತಡೆಗೋಡೆ ನಿರ್ಮಿಸುವ ಪ್ರಸ್ತಾವಣೆಯನ್ನು ಶಾಸಕರ ಮುಂದಿರಿಸಲಾಗಿದೆಯಾದರೂ, ಈ ಭಾಗದಲ್ಲಿ ಅರೆಬರೆ ಕಾಮಗಾರಿ ನಡೆಸಿ, ಸಮಸ್ಯೆಯೇ ಇಲ್ಲದ ಗೆಸ್ಟ್‍ಹೌಸ್ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ತಕ್ಷಣವೇ ವಾಸದ ಮನೆಗಳಿಗೆ ಅಪಾಯ ಒದಗಬಹುದಾದ ಈ ಕಾಡಿಪಟ್ಣ ಪ್ರದೇಶದಲ್ಲಿ, ತಡೆಗೋಡೆ ವ್ಯವಸ್ಥೆ ಕಲ್ಪಿಸುವಂತೆ ಅಶೋಕ್ ಸಾಲ್ಯಾನ್ ಆಗ್ರಹಿಸಿದ್ದಾರೆ.
ತೌಕ್ತೆ ಚಂಡ ಮಾರುತ ಎಪೆಕ್ಟ್ ಕರಾವಳಿ ಭಾಗದಲ್ಲಿ ಬಿರುಸುಗೊಂಡಿದ್ದು ಭಾರೀ ಮಳೆಗಾಳಿಯಿಂದಾಗಿ ಸಮುದ್ರದ ಬೃಹತ್ ಅಲೆಗಳು ಮೀನುಗಾರಿಕಾ ರಸ್ತೆಗೆ ಅಪ್ಪಳಿಸುತ್ತಿದೆ. ಕಾಡಿಪಟ್ಣ ಪ್ರದೇಶದಲ್ಲಿ ರಸ್ತೆ ಏನಾದರೂ ಕಡಿತಗೊಂಡರೆ ಈ ಪ್ರದೇಶದ ಮನೆಗಳು ಸಹಿತ ಬ್ಲೂ ಪ್ಲಾಗ್ ಬೀಚಿನ ಸಂಪರ್ಕವೂ ಕಡಿತಗೊಳ್ಳಲಿದೆ. ಬ್ಲೂ ಪ್ಲಾಗ್ ಬೀಚಿಗೆ ಈ ವರಗೆ ಹಾನಿಯಾಗದಿದ್ದರೂ ತೆರೆಗಳು ಅಪ್ಪಳಿಸುತ್ತಿದೆ.
ಬೋಟ್ ಮುಳುಗಡೆ: ಕಾಡಿಪಟ್ಣ ಪ್ರದೇಶÀದ ಅನತಿ ದೂರದಲ್ಲಿ ಮೀನುಗಾರ ಬೋಟೊಂದು ಪಲ್ಟಿಯಾಗಿ ತೇಲುತ್ತಿರುವುದು ಕಂಡು ಬಂದಿದೆ. ಇದು ಎಲ್ಲಿಂದ ಬಂತು, ಎಷ್ಟು ಜನರಿದ್ದರು ಎಂಬುದು ಯಾರಿಗೂ ತಿಳಿದಿಲ್ಲ, ಕಡಲು ಬಿರುಸುಗೊಂಡಿರುವುದರಿಂದ ಆ ಬೋಟನ್ನು ದೂರದಿಂದ ವೀಕ್ಷೀಸುವುದು ಬಿಟ್ಟರೆ ಬೇರೇನೂ ಮಾಡಲಾಗದ ಸ್ಥಿತಿ ಮೀನುಗಾರದ್ದಾಗಿದೆ

Related posts

Leave a Reply

Your email address will not be published. Required fields are marked *