Header Ads
Breaking News

ಬಿ. ರಾಜೇಂದ್ರ ಇಂದ್ರ ರಿಗೆ ಬೀಳ್ಕೊಡುಗೆ ಸಮಾರಂಭ

ಉಜಿರೆ, ಮಾ.31 : ವೃತ್ತಿ ಜೀವನದ ಏಳು-ಬೀಳುಗಳನ್ನೇ ಜೀವನ ಶಿಕ್ಷಣ ಪಾಠವನ್ನಾಗಿಸಿಕೊಂಡು, ಸುದೀರ್ಘ 32 ವರ್ಷಗಳ ಕಾಲ ವೃತ್ತಿ ಸೇವೆ ಪೂರೈಸಿದ ಬಿ. ರಾಜೇಂದ್ರ ಇಂದ್ರರು ಇಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿದ್ದಾರೆ ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರು ಡಾ. ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು. ಅವರು ಉಜಿರೆಯ ಎಸ್.ಡಿ.ಎಂ ಕಾಲೇಜಿನ, ಕಛೇರಿ ಅಧೀಕ್ಷರಾದ ಬಿ. ರಾಜೇಂದ್ರ ಇಂದ್ರ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜೇಂದ್ರ ಇಂದ್ರ ಇವರ ಕುರಿತು ಮಾತನಾಡುತ್ತಾ, ಅವರ ವೃತ್ತಿ ಜೀವನವನ್ನು ನೆನಪಿಸಿಕೊಂಡು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಭವ ಎನ್ನುವುದು ಶಿಕ್ಷಣದಿಂದ ಮಾತ್ರವಲ್ಲದೇ, ಇಂತಹ ಸಂಪನ್ಮೂಲ ವ್ಯಕ್ತಿಗಳ ಅನುಭವದಿಂದ ಹೊಸ ಬಗೆಯ ಶಿಕ್ಷಣವನ್ನು ಕಲಿಯಬಹುದಾಗಿದೆ. ಜೊತೆಗೆ ಹೊಸ ಕಲಿಕೆಯ ಮಾದರಿ ಇವರಾಗಿದ್ದಾರೆ ಎಂದರು.
ರಾಜೇಂದ್ರ ಇಂದ್ರ ಅವರು ತಮ್ಮ ವೃತ್ತಿ ಜೀವನದ ಕೆಲವು ದಿನಗಳನ್ನು ಮೆಲುಕು ಹಾಕುತ್ತಾ, ಪ್ರಾರಂಭ ದಿನಗಳಾದ ಸಿದ್ಧವನದಲ್ಲಿ ನಡೆದ ಕೆಲವು ಘಟನೆಗಳನ್ನು, ಮಂಜುವಾಣಿ ಪತ್ರಿಕೆ ಮುದ್ರಣದ ಆರಂಭದ ದಿನಗಳನ್ನು, ಪ್ರಕೃತಿ ಮತ್ತು ಯೋಗ ಚಿಕಿತ್ಸಾದಲ್ಲಿ ಸಲ್ಲಿಸಿದ ವೃತ್ತಿ, ಎಸ್.ಡಿ.ಎಂ ಕಾಲೇಜಿನ ಅನುಭವಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು. ತಮ್ಮ ಪದವಿ ಶಿಕ್ಷಣದ ಆರಂಭ ಬದುಕಿನಿಂದ ಜೊತೆಯಾದ ಕುಲಸಚಿವರಾದ ಡಾ. ಸಂಪತ್ ಕುಮಾರ್ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ದಿನೇಶ್ ಚೌಟ ಇವರೊಂದಿಗಿನ ಒಡನಾಟದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ ಕಾಲೇಜಿನ ಅಧ್ಯಾಪಕರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ್ ಪಿ, ಅಧ್ಯಾಪಕರ ಸಂಘದ ಕಾರ್ಯದರ್ಶಿ ಹಾಗೂ ಆಂಗ್ಲ ವಿಭಾಗದ ಸಹ ಪ್ರಾಧ್ಯಾಪಕರು ಪ್ರೋ ಜಿ.ಆರ್ ಭಟ್, ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *