Header Ads
Breaking News

ಬೆಂಗ್ರೆಯ ಅಕ್ಷಯ ಸಭಾಭವನದಲ್ಲಿ ಉಚಿತ ಕೋವಿಡ್ ಲಸಿಕಾ ಶಿಬಿರ

ಯುವಜನ ಸಂಘ ‘ಅಕ್ಷಯ’ ಹಾಗೂ ಶ್ರೀ ವೀರ ವಿನಾಯಕ ಜನಸೇವಾ ಟ್ರಸ್ಟ್(ರಿ) ಇವರ ಸಹಭಾಗಿತ್ವದಲ್ಲಿ ಬೆಂಗ್ರೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಉಚಿತ ಕೋವಿಡ್ ಲಸಿಕಾ ಶಿಬಿರ ಅಕ್ಷಯ ಸಭಾಭವನದಲ್ಲಿ ನಡೆಯಿತು.

ಸರ್ಕಾರದ ನಿಯಮದಂತೆ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ವಿತರಣೆ ಮಾಡುತ್ತಿದ್ದು, ಯುವಜನ ಸಂಘ ಅಕ್ಷಯ ಹಾಗೂ ಶ್ರೀ ವೀರ ವಿನಾಯಕ ಜನಸೇವಾ ಟ್ರಸ್ಟ್ ಇವರ ಸಹಭಾಗಿತ್ವದಲ್ಲಿ ಉಚಿತ ಕೋವಿಡ್ ಲಸಿಕೆ ವಿತರಣಾ ಶಿಬಿರವನ್ನು ಹಮ್ಮಿಕೊಂಡರು.
ರೋಟರಿ ಕ್ಲಬ್ ಮಂಗಳೂರು ಸೌತ್ ಮಾಜಿ ಅಧ್ಯಕ್ಷರಾದ ರೋಟರಿಯನ್ ಅಶೋಕ್ ಕುಮಾರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.ಇದೇ ವೇಳೆ ಸ್ಥಳೀಯ ಕಾರ್ಪೋರೇಟರ್ ಜಗದೀಶ್ ಅವರು ಮಾತನಾಡಿ, ಈಗಾಗಲೇ ಬೋಳೂರು ವಾರ್ಡಿನ ಅಕ್ಷಯ ಸಭಾಭವನದಲ್ಲಿ ಈಗಾಗಲೇ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ. ಜನರು ಉತ್ಸಾಹದಿಂದ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.ಆನಂತರ ಮಾತನಾಡಿದ ಶ್ರೀ ವಿನಾಯಕ ಜನಸೇವಾ ಟ್ರಸ್ಟ್‍ನ ಕಿಶೋರ್ ಅವರು ಉಚಿತ ಕೋವಿಡ್ ಲಸಿಕೆ ವಿತರಣಾ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಈಗಾಗಲೇ ಸುಮಾರು 150 ಮಂದಿ ಭಾಗವಹಿಸಿದ್ದಾರೆ. ಕಾರ್ಪೋರೇಟರ್ ಜಗದೀಶ್ ಅವರು ಕಾರ್ಯಕ್ರಮ ನಡೆಸಲು ಸಹಕಾರವನ್ನು ನೀಡಿದ್ದಾರೆ. ಈ ಉಚಿತ ಲಸಿಕಾ ಶಿಬಿರದಿಂದ ಇಲ್ಲಿನ ಪರಿಸರವದವರಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಿದರು.ಈ ಸಂದರ್ಭ ಬೆಂಗ್ರೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಎಲೆನ್ ಗೋವನ್, ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ. ಶ್ಯಾಮ್, ಡಾ. ಸುಧಾನ್, ಡಾ. ಮೇಘಾ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *