Header Ads
Breaking News

ಬೆಳ್ತಂಗಡಿ ತಾಲೂಕಿನಾದ್ಯಂತ ಕರ್ಫ್ಯೂ ಮತ್ತಷ್ಟು ಬಿಗಿ

ಬೆಳ್ತಂಗಡಿ: ಕೋವಿಡ್-19 ನಿಯಂತ್ರಣಕ್ಕಾಗಿ ಬೆಳ್ತಂಗಡಿ ತಾಲೂಕಿನಾದ್ಯಂತ ಕರ್ಫ್ಯೂವನ್ನು ಮತ್ತಷ್ಟು ಬಿಗಿಗೊಳಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದು, ಉಜಿರೆ , ಗುರುವಾಯನಕೆರೆ ಬೆಳ್ತಂಗಡಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಖಾಕಿ ಪಡೆ ನಾಕಾಬಂದಿ ಮಾಡಿದ್ದಾರೆ.

ಅಲ್ಲದೇ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ಮಾತ್ರ ಅವಕಾಶ ನೀಡಿದ್ದ ಕಾರಣ ಸಂತಕಟ್ಟೆಯಲ್ಲಿ ವಾಹನ ಸಂಚಾರ ದಟ್ಟವಾಗಿದ್ದು, 9ಗಂಟೆ ಬಳಿಕ ಬಂದ ಪ್ರತಿಯೊಂದು ವಾಹನಗಳನ್ನು ತಪಸಾಣೆ ನಡೆಸಿ ಬಿಡಲಾಗುತ್ತಿದೆ.

ಇನ್ನು ನಿಗದಿತ ಸಮಯ ಬಳಿಕ ಅನಗತ್ಯ ತಿರುಗಾಟ ನಡೆಸುತ್ತಿದ್ದ ವಾಹನ ಸಂಚಾರರಿಗೆ ಪೊಲಿಸ್ ಅಧಿಕಾರಿಗಳು ಲಾಠಿ ರುಚಿ ತೋರಿಸುತ್ತಿದ್ದು, ದಂಡವನ್ನು ವಿಧಿಸುವ ಮೂಲಕ ಕೋವಿಡ್ ನಿಯಮ ಉಲ್ಲಂಘನೆ ಮಾಡಿದವರಿಗೆ ಖಡಕ್ ಎಚ್ಚರಿಕೆ ನೀಡುತ್ತಿದ್ದಾರೆ.

ಇನ್ನು 9ಗಂಟೆಯೊಳಗೆ ಕಚೇರಿ ಸೇರಬೇಕೆಂದು ದ.ಕ ಜಿಲ್ಲಾಧಿಕಾರಿ ಆದೇಶಿಸಿದ್ದರೂ ವಿವಿಧ ಇಲಾಖೆಗಳ ಸರಕಾರಿ ನೌಕರರೇ ತಡವಾಗಿ ಬಂದಿದ್ದು, ಅತೀ ಹೆಚ್ಚು ವಾಹನ ಸರಕಾರಿ ಅಧಿಕಾರಿಗಳದೇ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *