Header Ads
Breaking News

ಬೇಲೂರು ಪುರಸಭೆಯ ವ್ಯಾಪ್ತಿಯಲ್ಲಿ ಕಳಪೆ ಒಳಚರಂಡಿ ಕಾಮಗಾರಿ

hasana drainage problem

ಹಾಸನ ಜಿಲ್ಲೆಯ ಬೇಲೂರು ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿಯ ಕಾಮಗಾರಿ ಕಳಪೆಯಿಂದ ಕೂಡಿದ್ದು, ಹಲವಾರು ಬಾರಿ ಸಾರ್ವಜನಿಕರು ದೂರು ನೀಡಿದ್ದರೂ ಪುರಸಭೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ.

hasana drainage problem
ಬೇಲೂರಿನ 23 ವಾರ್ಡುಗಳ ಪೈಕಿ, 12ನೇ ವಾರ್ಡು ಅತಿ ಸ್ಲಂ ಎಂದು ಪರಿಗಣಿಸಲಾಗಿದೆ. ದೇಶ-ವಿದೇಶಗಳಿಂದ ಬರುವಂತ ಪ್ರವಾಸಿಗರು, ಧರ್ಮಸ್ಥಳದಿಂದ ಕೊಟ್ಟಿಗೆಹಾರ ಮೂಡಿಗೆರೆ ಚಿಕ್‍ನಳ್ಳಿ ಮಾರ್ಗವಾಗಿ ದೇವಸ್ಥಾನ ರಸ್ತೆಯಲ್ಲಿ 12ನೇ ವಾರ್ಡ್ ನಿಂದಲೇ ಹಾದುಹೋಗಬೇಕಾಗುತ್ತದೆ, ರಸ್ತೆ ಮಧ್ಯದಲ್ಲಿಯೇ ಒಳಚರಂಡಿಯ ಗಲೀಜು ದುರ್ವಾಸನೆ ಬರುವಂತಹ ನೀರು ಪ್ರವಾಸಿಗರನ್ನು ಮತ್ತು ಸ್ಥಳೀಯ ನಿವಾಸಿಗಳಿಗೆ ಸ್ವಾಗತಿಸುತ್ತದೆ. ಎಸ್ ಎಸ್ ಮಂಜುನಾಥ್, ಮುಖ್ಯಾಧಿಕಾರಿ ಆಡಳಿತಾವಧಿಯಲ್ಲಿ ಬೇಲೂರು ಪಟ್ಟಣದಲ್ಲಿ ನಡೆದಿರುವಂತಹ ಕಾಮಗಾರಿ ಬಗ್ಗೆ ಹಲವು ಬಾರಿ ದೂರು ಕೇಳಿ ಬಂದರೂ ಸಹ ಯಾವುದೇ ರೀತಿಯ ತನಿಖೆಯಾಗಲಿ ಪರಿಶೀಲನೆಯಾಗಲಿ ನಡೆದಿಲ್ಲ. ಬೇಲೂರು ಪುರಸಭೆ ಚುನಾವಣೆ ನಡೆಯದೆ ಪುರಸಭೆಯ ಪ್ರಕರಣ ನ್ಯಾಯಾಲಯದಲ್ಲಿ ಇದ್ದ ಕಾರಣ ಎರಡು ವರ್ಷಗಳ ಕಾಲ ಜನಪ್ರತಿನಿಧಿ ಇಲ್ಲದೆ ಮುಖ್ಯಾಧಿಕಾರಿಯ ಅಂದಾ ದರ್ಬಾರ್ ಅಂತೂ ನಡೆದಿರುವುದು ಸತ್ಯ. ಪುರಸಭೆಯ ದಾಖಲೆ ಪ್ರಕಾರ 12ನೇ ವಾರ್ಡಿಗೆ ಒಳಚರಂಡಿ ಕಾಮಗಾರಿಗೆ ಸತತವಾಗಿ ಮೂರು ಬಾರಿ ಲಕ್ಷಾಂತರ ಹಣ ವೆಚ್ಚವಾಗಿದೆ. ಆದರೂ ಸಹ ಈ ಸಮಸ್ಯೆ ಬಗೆಹರಿದಿಲ್ಲ. ಮಳೆ ಬಂದರೆ ಉಕ್ಕಿ ಹರಿಯುವ ಒಳಚರಂಡಿ ವ್ಯವಸ್ಥೆ ಸರಿ ಪಡಿಸುವವರು ಯಾರು ಎಂದು ಯಕ್ಷಪ್ರಶ್ನೆಯಾಗಿದೆ. ಈ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ಪೋಲಾಗಿರುವ ಹಣ ಸರ್ಕಾರಕ್ಕೆ ಹಿಂತಿರುಗಿಸಬೇಕು ಎಂಬುವುದು ಇಲ್ಲಿನ ಸಾರ್ವಜನಿಕರ ಬೇಡಿಕೆಯಾಗಿದೆ.

Related posts

Leave a Reply

Your email address will not be published. Required fields are marked *