Header Ads
Breaking News

ಬೇಲೂರು ಸೋಷಿಯಲ್ ಸರ್ವಿಸ್ ಟೀಮ್‍ನಿಂದ ಕಿಟ್ ವಿತರಣೆ

ಹಾಸನ ಜಿಲ್ಲೆ ಬೇಲೂರು ತಾಲೂಕು ಲಾಕ್ ಡೌನ್ ಸಂದರ್ಭದಲ್ಲಿ, ದೂರದ ಬೀದರ್ ಜಿಲ್ಲೆಯ ಹುಮ್ನಾಬಾದ್ ಬಾದ್ ತಾಲ್ಲೂಕಿನ ಸುಮಾರು 4 ರಿಂದ 5 ಕುಟುಂಬಗಳು ಊರೂರು ತಿರುಗುತ್ತಾ ತಮ್ಮ ಚಿಕ್ಕ ಮಕ್ಕಳು ಹಾಗೂ ಸಾಕುಪ್ರಾಣಿಗಳ ಜತೆಗೂಡಿ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುತ್ತಾ ಕುಲಕಸುಬು ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಹಳೇ ಲೋಹಗಳಿಂದ ವಿಗ್ರಹಗಳನ್ನು ತಯಾರಿಸುವ ಕೆಲಸವಾಗಿದ್ದು ಊರೂರು ಅಲೆಯುತ್ತಾ ಇರಬೇಕಾದರೆ ಇಂದು ಬೇಲೂರು ಪಟ್ಟಣದ ಜೆ ಪಿ ನಗರದ ಹೇಮಾವತಿ ಮಂಜುನಾಥ್ ರವರ ಖಾಲಿ ನಿವೇಶನದಲ್ಲಿ 4ಕ್ಕೆ ತಾತ್ಕಾಲಿಕ ಟೆಂಟ್ ಗಳನ್ನು ಹಾಕಿ ದಿನದೂಡುತ್ತಿದ್ದರು. ಅವರಿಗೆ ಬೇಲೂರು ಸೋಷಿಯಲ್ ಸರ್ವಿಸ್ ಟೀಮ್ ಮಾನವೀಯ ನೆಲೆಯಿಂದ ದಿನ ನಿತ್ಯ ಬಳಕೆಯ ವಸ್ತುಗಳ ಕಿಟ್ ಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಕಿಟ್ ಗಳನ್ನು ವಿತರಣೆ ಮಾಡಿ ಮಾತನಾಡಿದ ರೈತ ಮುಖಂಡ ಸ್ವಾಮಿ ಗೌಡರವರು ಮಾನವೀತೆಯ ಮುಂದೆ ಯಾವುದೂ ಇಲ್ಲ. ಮಾನವ ಒಳಿತಿಗಾಗಿ ಉತ್ತಮ ಕೆಲಸಗಳ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಫಾಜಿಲ್ ಆಶೀಕ್, ಸಂಪತ್ ಮಾಸ್ಟರ್, ಆಶು, ನಿಷಾದ್, ಜಮಿಲ್, ಮುಜಾಮಿಲ್ ,ಖಾಜಿಯಾ ಅಸ್ಗರ್,ಗೌರವ ಸಲಹೆಗಾರರಾದ ರೈತಸಂಘ ಮುಖಂಡ ಸ್ವಾಮಿಗೌಡ ಇನ್ನು ಮುಂತಾದವರು ಹಾಜರಿದ್ದರು.

Related posts

Leave a Reply

Your email address will not be published. Required fields are marked *