Header Ads
Breaking News

ಬೈಂದೂರಿನ ಗಂಗೆಬೈಲಿನಲ್ಲಿ ರಕ್ತದಾನ ಶಿಬಿರ

ಉಡುಪಿ ಜಿಲ್ಲೆ ಬೈಂದೂರು ತಾಲೂಕು ಶ್ರೀರಾಮ ಭಜನಾ ಮಂದಿರ ಗಂಗೆಬೈಲು ಮತ್ತು ಜಿಲ್ಲಾ ಆಸ್ಪತ್ರೆ ರಕ್ತನಿಧಿ ಇವರ ಸಹಯೋಗದಲ್ಲಿ ಶ್ರೀ ರಾಮ ಭಜನಾ ಮಂದಿರ ವಠಾರ ಗಂಗೆಬೈಲಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.


18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಪ್ರಕ್ರಿಯೆಯಲ್ಲಿದ್ದು, ರಾಷ್ಟ್ರೀಯ ರಕ್ತಚಾಲನ  ಪರಿಷತ್ (ಎನ್.ಬಿ.ಟಿ.ಸಿ)ನ ನಿರ್ದೇಶನ ಮತ್ತು ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಲಸಿಕೆ ಪಡೆದವರು ಮುಂದಿನ 28 ದಿನ ಕಾಲ ರಕ್ತದಾನ ಮಾಡು ವಂತಿಲ್ಲ. ಎರಡು ಡೋಸ್‍ಗಳ ನಡುವೆ 28 ದಿನ ಅಂತರವಿದ್ದು, ಒಟ್ಟಾರೆ 56 ದಿನ ರಕ್ತದಾನ ಸಾಧ್ಯವಾಗುವುದಿಲ್ಲ. ಇದರಿಂದಾಗಿ ರಾಜ್ಯದಲ್ಲಿ ರಕ್ತದ ತೀವ್ರ ಕೊರತೆ ಎದುರಾಗುವ ಆತಂಕ ಸೃಷ್ಟಿಯಾಗಲಿದ್ದು ಲಸಿಕೆ ಪಡೆಯುವುದಕ್ಕೆ ಮುನ್ನ ರಕ್ತದಾನ ಮಾಡಿ ಜೀವಗಳನ್ನು ಉಳಿಸುವ ಕಾರ್ಯದಲ್ಲಿ ಗಂಗೆಬೈಲು ಹಾಗೂ ಆಸುಪಾಸಿನ ಊರಿನ ಗ್ರಾಮಸ್ಥರು ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡರು.

Related posts

Leave a Reply

Your email address will not be published. Required fields are marked *