Header Ads
Breaking News

ಬೈಂದೂರು ತಹಶೀಲ್ದಾರ್‍ರಿಂದ ಪ್ರತಿ ಗ್ರಾಮಕ್ಕೂ ಭೇಟಿ : ಕೊರೊನಾ ಮುಕ್ತವಾಗಿಸಲು ಕ್ರಮ

ಬೈಂದೂರು ತಾಲೂಕು ನೂತನ ತಹಶೀಲ್ದಾರ್ ಶೋಭಾಲಕ್ಷೀ ಎಚ್. ಅಧಿಕಾರ ವಹಿಸಿಕೊಂಡಿದ್ದಾಗಿನಿಂದ ಸಮಯವನ್ನು ವ್ಯರ್ಥಮಾಡದೆ ಬೈಂದೂರಿನ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಕೊರೊನಾ ಮುಕ್ತವಾಗಿಸಲು ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಚರ್ಚೆ ಮಾಡಿದರು.

ಬೈಂದೂರು, ಉಪ್ಪುಂದ, ನಾಡಾ, ಬಡಾಕೆರೆ, ಅರೆಹೊಳೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಕೊವಿಡ್ ನಿಯಾಮಾಳಿಗಳನ್ನು ಉಲ್ಲಂಘಿಸಿದವರಿಗೆ ಕಾನೂನು ನೀತಿ ಪಾಠ ಮಾಡಿ ಕೊವಿಡ್ ನಿಯಾಮವಳಿಯ ಮಾರ್ಗ ಸೂಚಿಯನ್ನು ಪಾಲಿಸಿ ಕರೋನ ತೊಲಗಿಸುವಲ್ಲಿ ನಿಮ್ಮೇಲ್ಲರ ಸಹಕಾರ ಮುಖ್ಯವೆಂದರು. ಮದುವೆ ಮನೆಗಳಿಗೆ ಭೇಟಿ ಕೊಟ್ಟು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಹಾಗೂ ಕೊವಿಡ್ ನಿಯಾಮಾಳಿಯ ಎರಡನೇ ಹಂತದ ಪ್ರಕಾರ ಮೆಹಂದಿ,ಮದುವೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಸುವಂತಿಲ್ಲ, ಎಲ್ಲಿಯಾದರೂ ನಡೆದರೆ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದರು.
ಅನಗತ್ಯ ನೆಪವೊಡ್ಡಿ ವಾಹನ ಚಾಲನೆ ಮಾಡುವ ವಾಹನ ಚಾಲಕರಿಗೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕರೋನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ನಿಯಮಾವಳಿ ಪ್ರಕಾರ ನಡೆದುಕೊಳ್ಳದೇ ಇರುವ ಅಂಗಡಿಗಳಿಗೆ ಕಾನೂನು ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು.

Related posts

Leave a Reply

Your email address will not be published. Required fields are marked *