Header Ads
Breaking News

ಭಾರೀ ಗಾಳಿ ಮಳೆ ಹಿನ್ನೆಲೆ : ಕೋಡಿಕಲ್‍ನಲ್ಲಿ ಫ್ಲ್ಯಾಟ್‍ವೊಂದರ ತಡೆಗೋಡೆ ಕುಸಿತ

ನಗರದ ಕೋಡಿಕಲ್‍ನಲ್ಲಿ ಫ್ಲ್ಯಾಟ್‍ವೊಂದರ ತಡೆಗೋಡೆ ಕುಸಿದ ಪರಿಣಾಮ ಸಮೀಪದ ಮನೆಗಳಿಗೆ ಹಾನಿಯಾದ ಘಟನೆ ನಡೆದಿದೆ. ತಡರಾತ್ರಿ ಸುರಿದ ಗುಡುಗು ಮಿಂಚು ಸಹಿತ ಭಾರೀ ಗಾಳಿ ಮಳೆಗೆ ಕೋಡಿಕಲ್‍ನ ನಡಿಗುತ್ತು ಕಾಂಪೌಂಡ್‍ನ 4ನೇ ಬಿ ಕ್ರಾಸ್‍ನಲ್ಲಿರುವ ತಡೆಗೋಡೆ ಕುಸಿದಿದೆ. ಇದರಿಂದ ಮನೆಗಳಿಗೆ ಭಾಗಶಃ ಹಾನಿಯಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಈಗಾಗಲೇ ಈ ಸಮಸ್ಯೆ ಬಗ್ಗೆ ಮನಪಾ ಮೇಯರ್‍ಗೆ ಮಾಹಿತಿ ನೀಡಲಾಗಿದೆ. ಇದಕ್ಕೆ ಬದಲಿ ವ್ಯವಸ್ಥೆ ಮಾಡಿಕೊಡುವಂತೆ ಹಾಗೂ ಶಾಶ್ವತ ತಡೆಗೋಡೆ ನಿರ್ಮಿಸಿ ಕೊಡುವಂತೆ ಮನವಿ ಮಾಡಲಾಗಿದೆ ಎಂದು ಸ್ಥಳೀಯರಾದ ದೇವದಾಸ್ ಬಂಗೇರ ಮಾಧ್ಯಮಕ್ಕೆ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *