ಭೂಗತವಾಗುತ್ತಿರುವ ಪಡುಬಿದ್ರಿ ಸ್ಮಶಾನ ಮುಕ್ತಿಗಾಗಿ ಬೇಡಿಕೆ..

ತನ್ನ ಅಸ್ಥಿತ್ವವನ್ನೇ ಕಳೆದುಕೊಂಡು ಭೂಗತದ ಅಂಚಿನಲ್ಲಿರುವ ಪಡುಬಿದ್ರಿ ಸ್ಮಶಾನ ಉಳಿಸುವಂತೆ ಅಂಬೇಡ್ಕರ್ ಯುವಸೇನೆಯ ತಾಲೂಕು ಅಧ್ಯಕ್ಷ ಲೋಕೇಶ್ ಕಂಚಿನಡ್ಕ ಹೆಸರಲ್ಲಿ ಸಾಮಾಜಿಕ ಜಲತಾಣ ದಲ್ಲಿ ಫೋಸ್ಟೊಂದು ಹರಿದಾಡುತ್ತಿದಂತೆ ಚುರುಕಾದ ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷ ರವಿ ಶೆಟ್ಟಿ ಭೇಟಿ ನೀಡಿ ಸಮಸ್ಯೆ ತಕ್ಷಣವೇ ಪರಿಹಾರ ಮಾಡುವ ಭರವಸೆ ವ್ಯಕ್ತ ಪಡಿಸಿದ್ದಾರೆ.

ಪಡುಬಿದ್ರಿಯ ಕಂಚಿನಡ್ಕ ಭಾಗದಲ್ಲಿ ಇರುವ ಏಕೈಕ ಸಾರ್ವಜನಿಕ ರುದ್ರಭೂಮಿ ಇದಾಗಿದೆ, ಇಲ್ಲಿ ಎಲ್ಲಾ ಭೂಲಭೂತ ಸೌಕರ್ಯಗಳಿದ್ದರೂ ನಿರ್ವಾಹನೆಯ ಕೊರತೆಯೋ ಏನೋ ಯಾವುದೂ ಸುಸ್ಥಿತಿಯಲ್ಲಿ ಇಲ್ಲ, ಪ್ರಮುಖವಾಗಿ ಹೆಣ ಸುಡುವ ಸಲಕರಣೆಯ ಬಿಡಿಭಾಗಗಳು ತನ್ನ ಪರಿಚಯವನ್ನೇ ಕಳೆದು ಕೊಂಡಷ್ಟು ವಿರೂಪವಾಗಿದೆ. ಕಟ್ಟಿಗೆ ಶೇಖರಣೆ ಮಾಡುವ ಕೋಣೆ, ವಿದ್ಯುತ್ ದೀಪ ಎಲ್ಲವೂ ಅಯೋಮಯ. ಆದರೂ ಬೇರೆ ವಿಧಿ ಇಲ್ಲದೆ ಇಲ್ಲಿ ಹೆಣಗಳನ್ನು ಬೂದಿ ಮಾಡಲಾಗುತ್ತಿದೆ. ಈ ದುರವಸ್ಥೆಯ ಬಗ್ಗೆ ಇಲ್ಲಿ ಕಾರ್ಯ ನಿರ್ವಾಹಿಸುತ್ತಿರುವ ಮಹಿಳೆ ಗ್ರಾ.ಪಂ. ಗಮನಕ್ಕೆ ತಂದಿಲ್ಲವೇ..? ತಂದಿದ್ದರೂ ಗ್ರಾ.ಪಂ. ನಿರ್ಲಕ್ಷ್ಯ ತೋರಿದ್ದರಿಂದಲೋ ಏನೋ ಪರಿಸ್ಥಿತಿ ಕೈ ಮೀರಿ ಹೋಗಿದ್ದು, ರುದ್ರಭೂಮಿಗೆ ಕಾಯಕಲ್ಪದ ಅಗತ್ಯತೆ ಇದೆ.

ಅಧ್ಯಕ್ಷರ ಭರವಸೆ ; ಸಾಮಾಜಿಕ ಜಾಲತಾಣದಲ್ಲಿ ಗ್ರಾಮದ ಹೆಸರಲ್ಲಿ ಹರಿದಾಡುತ್ತಿರುವ ವಿಚಾರವನ್ನು ಮನಗಂಡು ತಕ್ಷಣವೇ ಸ್ಪಂಧಿಸಿ ಸ್ಥಳಕ್ಕೆ ಭೇಟೆ ನೀಡಿ ಪರಿಶೀಲಿಸಿ, ತಕ್ಷಣವೇ ಹೆಣಸುಡಲು ಬೇಕಾಗುವ ಅಗತ್ಯ ಪರಿಕರಗಳ ಜೋಡನೆ ಕಾರ್ಯ ಒಂದೆರಡು ದಿನದಲ್ಲಿ ಜೋಡಿಸಲಾಗುವುದು, ಉಳಿದಂತೆ ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಶಾಸಕರ ನಿಧಿಗಾಗಿ ಶಾಸಕರಿಗೆ ಮನವಿ ನೀಡಿ ರುದ್ರಭೂಮಿಯನ್ನು ಸುಸಜ್ಜಿತವಾಗಿ ಮಾಡಿ ಅದರ ನಿರ್ವಹಣೆಗಾಗಿ ಸಮಿತಿಯೊಂದನ್ನು ರಚಿಸಲಾಗುವುದೆಂದರು.

 

Related Posts

Leave a Reply

Your email address will not be published.