Header Ads
Breaking News

ಮಂಗಳೂರಲ್ಲಿ ಮುತ್ತಿನಂತೆ ಹೊಳೆಯುವ ಮತ್ಸ್ಯಕನ್ಯೆ

Artistry by Priya Baliga
Artistry by Priya Baliga

ಮುತ್ತಿನಂತೆ ಹೊಳೆಯುವ ಇವಳ ನೀಲಿಯ ಮೊಗ, ಸಮುದ್ರದ ಚಿಪ್ಪುಗಳಿಂದ ರಚಿಸಿದ ಕಿರೀಟ. ಮಾನಸ ಸರೋವರದಲ್ಲಿ ಈಜಾಡಬೇಕಿದ್ದ ಈಕೆ, ಒಂದೇ ಸಮನೆ ಕಳೆದ ವಾರದಿಂದ ಕರಾವಳಿ ಜನರ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಪ್ರೊಫೈಲ್‍ಗಳ ಸ್ಟೋರಿಗಳಲ್ಲಿ, ಪೊ ಸ್ಟ್‍ಗಳಲ್ಲಿ ಹರಿದಾಡುತ್ತಿದ್ದಾಳೆ. ಹೌದು ಅವಳೇ ಇವಳು ಮತ್ಸ್ಯ ಕನ್ಯೆ.

ಹಾ. ಈಕೆ ನಿಜವಾದ ಮತ್ಸ್ಯ ಕನ್ಯೆಯಲ್ಲ. ಬದಲಾಗಿ ಮೇಕ್ ಓವರ್ ಮರ್ಮೈಡ್ ಆಗಿರೋ ಪ್ರಿಯಾ ಪವನ್ ಬಾಳಿಗ. ಹೌದು, ಲಾಕ್ ಡೌನ್ ಸಮಯದಲ್ಲಿ ತಮ್ಮ ಟೈಮ್ ಪಾಸ್‍ಗೆ ಎಂದು ಸಾರಿ ಚಾಲೇಂಜ್, ಟ್ರೇಡಿಷನಲ್ ಚಾಲೇಂಜ್ ಹೀಗೆ ಒಂದಷ್ಟು ಚಾಲೇಂಜ್ ಆಕ್ಸೆಪ್ಟೆಡ್ ಅನ್ನುವ ಇನ್ಸ್ಟಾಗ್ರಾಂ ರೀಲ್‍ಗಳನ್ನು ಮಾಡಿ ಸಾಮಜಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದನ್ನ ನೋಡಿದ್ದೇವೆ. ಅಂತೆಯೇ ಈ ಬಾರಿ ಪ್ರಿಯಾ ಬಾಳಿಗ ಆಯ್ಕೆ ಮಾಡಿದ ಸೆಲ್ಪ್ ಮೇಕಪ್‍ನ ಥೀಮ್ ಫ್ಯಾಂಟಸಿ ಮೇಕ್ ಅಪ್.Artistry by Priya Baliga

ಈ ಮೊದಲು ಅಂದರೆ 3 ವರ್ಷಗಳ ಹಿಂದೆ ಚೇತನಾ ಬ್ಯೂಟಿ ಲಾಂಜ್‍ನಲ್ಲಿ ಮೇಕಪ್ ಕೋರ್ಸ್ ಕಲಿಯುತ್ತಿರುವಾಗ ಆ ಸಂಸ್ಥೆಯ ಘಟಿಕೋತ್ಸವ (ಕಾನ್ವಕೇಶನ್ ಡೇ) ದಲ್ಲಿ ಏನಾದರೂ ಹೊಸತನವನ್ನು ಪ್ರಯತ್ನಿಸಬೇಕು ಎಂಬ ಕನಸನ್ನು ಇಟ್ಟುಕೊಂಡು ಫ್ಯಾಂಟಸಿ ಮೇಕಪ್ ಮಾಡಲು ಮುಂದಾದರು. ಫ್ಯಾಂಟಸಿ ಮೇಕಪ್ ಎಂಬ ವಿಭಾಗದಲ್ಲಿ ತನ್ವಿ ಶೆಟ್ಟಿ ಎಂಬ ರೂಪದರ್ಶಿಯ ಮೇಲೆ ಈ ಮತ್ಸ್ಯ ಕನ್ಯೆಯ ಮೇಕ್ ಓವರ್ ಮಾಡಿದ್ದರು. ಈ ರೀತಿಯ ಮೇಕಪ್ ಮಾಡಲು ನನ್ನನ್ನು ಪ್ರೊತ್ಸಾಹಿಸಿದ್ದು ನನ್ನ ಗುರುಗಳಾದ ಚೇತನಾ ಮೇಡಂ ಅನ್ನೋದು ಪ್ರಿಯಾ ಪವನ್ ಬಾಳಿಗ ಅವರ ಮಾತು.

ಭಾರತೀಯರ ಮುಖದ ಚರ್ಮದ ವಿನ್ಯಾಸವು ತುಂಬಾ ಸವಾಲಿನದ್ದಾಗಿದ್ದು, ಈ ಮೇಕ್ ಓವರ್‍ನಲ್ಲಿ ಹಸಿರು, ನೀಲಿ, ನೇರಳೆ, ಗುಲಾಬಿ ಬಣ್ಣಗಳ ಸಂಯೋಜನೆಯು ತುಂಬಾ ಆಕರ್ಷಕ ಹಾಗೂ ಅದರೊಂದಿಗೆ ಸರಿಸಮಾನವಾದ ಗಾತ್ರ, ಆಕಾರ, ಬಣ್ಣ ಸಂಯೋಜಿತ ಚುಕ್ಕಿಗಳನ್ನು ಬಿಡಿಸುವುದು ಪ್ರಿಯಾ ಅವರಿಗೆ ಎದುರಾದ ದೊಡ್ಡ ಸವಾಲು.Artistry by Priya Baliga ಈ ರೀತಿಯ ಮೇಕ್ ಓವರ್ ಗೆ ಒಪ್ಪುವಂತಹ ಬಟ್ಟೆ, ಕಿರೀಟ, ಆರ್ನಮೆಂಟ್ಸ್ ಗಾಗಿ ಹಗಲಿರುಳು ದುಡಿದಿದ್ದಾರೆ. ಪ್ರಿಯ ಹೇಳುವಂತೆ ಈ ಮೇಕ್ ಓವರ್‍ಗೆ ಬಳಸಿದಂತಹ ಕಿರೀಟವನ್ನು ಸ್ವತಃ ಪ್ರಿಯಾ ದಂಪತಿಯೇ ಸೇರಿಕೊಂಡು ಮಾಡಿರೋವಂಥದ್ದು. ಈ ಕಿರೀಟವನ್ನು ತಯಾರಿಸಲು ತೆಗೆದುಕೊಂಡ ದಿನಗಳು ಹಲವಾರು. ಜೊತೆಗೆ ಕಿರೀಟಕ್ಕೆ ಬಳಸಿದ ಮುತ್ತು, ವೈವಿಧ್ಯ ರೀತಿಯ ಸಮುದ್ರ ಚಿಪ್ಪುಗಳನ್ನು ಸ್ವತಃ ಪ್ರಿಯಾ ಪತಿ ಪವನ್ ಬಾಳಿಗ ಅವರು ಮುಂಡಾ, ಕಾಪು, ಮುಲ್ಕಿ, ಪಡುಬಿದ್ರಿ ಸಮುದ್ರ ಕಿನಾರೆಗಳಿಂದ ಸುಮಾರು ಎರಡು ದಿನಗಳಿಂದ ಸಂಗ್ರಹಿಸಿ ಒಟ್ಟು 2 ಚೀಲದಷ್ಟು ತಂದಿದ್ದರು. ಈ ಕಿರೀಟದ ತೂಕ 528 ಗ್ರಾಂಗಳು ಅಂದರೆ ಅರ್ಧ ಕೆಜಿಯಷ್ಟು.Artistry by Priya Baligaಇನ್ನು ಪ್ರಿಯಾರ ಈ ಸಾಧನೆ ಹಾಗೂ ಪರಿಶ್ರಮದ ಹಿಂದಿರೋ ಬಲವಾದ ಶಕ್ತಿ ಅಂದ್ರೆ ಅದು ಪತಿ ಉದ್ಯಮಿ ಪವನ್ ಬಾಳಿಗ ಹಾಗು ಕುಟುಂಬ ಸದಸ್ಯರು.ಇದರ ಜೊತೆ ಕೈ ಜೋಡಿಸಿದ್ದು ಇವರ ತಾಯಿ ಜ್ಯೋತಿ ಭಟ್. ಪ್ರಿಯಾರ ಅವಳಿ ಮಕ್ಕಳನ್ನ ಸಂಭಾಳಿಸುತ್ತಾ ಪ್ರಿಯಾರಿಗೆ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರಸ್ತುತ ಮಂಗಳೂರಿನ ಬಹುಬೇಡಿಕೆಯುಳ್ಳ ಮೇಕಪ್ ಆರ್ಟಿಸ್ಟ್ ಲಿಸ್ಟ್‍ನಲ್ಲಿದ್ದಾರೆ ಪ್ರಿಯ. ಆರ್ಟಿಸ್ಟ್ರಿ ಬೈ ಪ್ರಿಯಾ ಬಾಳಿಗ ಎಂಬ ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಡಿಫರೆಂಟ್ ಆಗಿರೋ ಮೇಕ್‍ಅಪ್ ವಿಡಿಯೋಗಳನ್ನ ಅಪ್ ಲೋಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲೂ ಸೆನ್ಸೇಷನ್ ಕ್ರಿಯೇಟ್ ಮಾಡ್ತಾ ಇದ್ದಾರೆ.

Related posts

Leave a Reply

Your email address will not be published. Required fields are marked *