Header Ads
Breaking News

ಮಂಗಳೂರಿನಲ್ಲಿ ಕುದ್ಮುಲ್ ರಂಗರಾವ್ ಜಯಂತಿ ಆಚರಣೆ

 ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಪೂಜ್ಯನೀಯ ಕುದ್ಮುಲ್ ರಂಗರಾವ್ ಜಯಂತಿಯನ್ನು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಿಲಾಯಿತು. ಇನ್ನು ಕುದ್ಮುಲ್ ರಂಗರಾವ್ ಅವರು ಭಾವಚಿತ್ರಕ್ಕೆ ಮಾಜಿ ಶಾಸಕ ಜೆ.ಆರ್.ಲೋಬೋ ಸೇರಿದಂತೆ ಮುಖಂಡರು ನಮನ ಸಲ್ಲಿಸಿದ್ರು.

ಈ ವೇಳೆ ಮಾತನಾಡಿದ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಕಾಶ್ ಬಿ.ಸಾಲಿಯಾನ್, ಕುದ್ಮಲ್ ರಂಗರಾವ್ ಶೋಚಿತ ವರ್ಗ ಜನರ ಪರವಾಗಿ, ಕೆಲಸ ಮಾಡಿದ ಧೀಮಂತ ವ್ಯಕ್ತಿಯಾಗಿದ್ದಾರೆ ಎಂದು ಅವರು ಹೇಳಿದ್ರು.ಇನ್ನು ಪಾಲಿಕೆ ವಿಪಕ್ಷ ನಾಯಕ ಎ.ಸಿ.ವಿನಯ್‌ರಾಜ್ ಮಾತನಾಡಿ, ಕುದ್ಮುಲ್ ರಂಗರಾವ್ ಅವರು ದಲಿತ ಸಮಾಜದ ಉದ್ದರಕ್ಕಾಗಿ ಅವಿರತ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.

ಈ ವೇಳೆ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಕಾರ್ಪೋರೇಟರ್‌ಗಳಾದ ರಜನೀಶ್ ಕಾಪಿಕಾಡ್ , ಅಪ್ಪಿ, ಕಾಂಗ್ರೆಸ್ ಮುಖಂಡ ಟಿ.ಕೆ.ಸುಧೀರ್, ಪರಿಶಿಷ್ಟ ಘಟಕ ಅಧ್ಯಕ್ಷ ಮಿಥನ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *