Header Ads
Breaking News

ಸೆಂಟ್ರಲ್ ಮಾರ್ಕೆಟ್‍ ಹಳೆಯ ಕಟ್ಟಡ ನೆಲಸಮ

ಮಂಗಳೂರಿನ ಪ್ರಸಿದ್ದ ಸೆಂಟ್ರಲ್ ಮಾರ್ಕೆಟ್‍ನ ಹಳೆಯ ಕಟ್ಟಡದ ನೆಲಸಮ ಮಾಡಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ತಂಡವೂ ನೇತೃತ್ವದಲ್ಲಿ ಕಟ್ಟಡದ ನೆಲಸಮ ಕಾರ್ಯವೂ ನಡೆಯಿತು. ಕಳೆದ ವರ್ಷ ಕೊರೋನ ಸೋಂಕಿನ ಸಂದರ್ಭ ವ್ಯಾಪಾರ-ವಹಿವಾಟು ಸ್ಥಗಿತಗೊಂಡ ಬಳಿಕ ಭಾಗಶಃ ಮುಚ್ಚಲ್ಪಟ್ಟಿದ್ದ ಸೆಂಟ್ರಲ್ ಮಾರ್ಕೆಟ್‍ನ ಈ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವ ಸಲುವಾಗಿ ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ. ಪೊಲೀಸ್ ಬಂದೋಬಸ್ತ್‍ನಲ್ಲಿ ಜೆಸಿಬಿ ಬಳಸಿಕೊಂಡು ನೆಲಸಮ ಕಾರ್ಯ ನಡೆದಿದ್ದು,. ಮಾರುಕಟ್ಟೆಯ ಕಟ್ಟಡದ ಬಳಿ ಯಾರೂ ಸುಳಿಯದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಇದೀಗ ಈ ಕಟ್ಟಡವನ್ನು ನೆಲಸಮ ಮಾಡಲಾಗಿದೆ.ಸ್ಥಳಕ್ಕೆ ಕಾಂಗ್ರೆಸ್ ನಿಯೋಗ ಭೇಟಿ ಕೊಟ್ಟಿತ್ತು. ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಆಡಳಿತ ವೈಖರಿ ವಿರುದ್ಧ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ರು. ವಿ4ನ್ಯೂಸ್‍ನೊಂದಿಗೆ ಮಾತನಾಡಿದ ಮಾಜಿ ಶಾಸಕ ಜೆ.ಆರ್. ಲೋಬೋ ಅವರು, ಕೋವಿಡ್ ಸಂದರ್ಭದಲ್ಲಿ ಯಾವುದೆ ಮಾಹಿತಿ ನೀಡದೇ ನೆಲಸಮ ಮಾಡಿರೋದು ಸರಿಯಲ್ಲ., ಮಾನವೀಯತೆಯಿಂದ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ. ಯಾವುದೇ ರೀತಿಯಲ್ಲಿ ನೋಟೀಸ್ ಕೊಡದೇ ನೆಲಸಮ ಮಾಡಿರುವುದು ಸರಿಯಲ್ಲ ಎಂದು ಅವರು ಹೇಳಿದರು.ಇನ್ನು ಪಾಲಿಕೆ ವಿಪಕ್ಷನಾಯಕ ವಿನಯ್ ರಾಜ್ ಮಾತನಾಡಿ, ಬಿಜೆಪಿ ಆಡಳಿತ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ರಜನೀಶ್ ಕಾಪಿಕಾಡ್, ಪ್ರವೀಣ್ ಚಂದ್ರ ಆಳ್ವಾ, ಕೇಶವ ಮರೋಳಿ ಸೇರಿದಂತೆ ಹಲವು ಮತ್ತಿತರು ಇದ್ದರು.

 

Related posts

Leave a Reply

Your email address will not be published. Required fields are marked *