Header Ads
Breaking News

ಮಂಗಳೂರು ದಕ್ಷಿಣ ಬಿಜೆಪಿ ಯುವ ಮೋರ್ಚಾದಿಂದ ಕೋವಿಡ್ ವಾರಿಯರ್ಸ್‍ಗಳಿಗೆ ದಿನಸಿ ಕಿಟ್ ವಿತರಣೆ

ಕೊರೋನಾ ಎರಡನೇ ಅಲೆಯಿಂದ ಜನ್ರು ಸಂಕಷ್ಟ ಎದರುರಿಸುತ್ತಿದ್ದು ಮಂಗಳೂರು ದಕ್ಷಿಣ ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ಸಚೀನ್ ರಾಜ್ ರೈ ಅವರ ನೇತೃತ್ವದಲ್ಲಿ ಕೋವಿಡ್ ವಾರಿಯರ್ಗಳಾದ ಅಂಗನವಾಡಿ ಕಾರ್ಯಕರ್ತೆಯರು, ಅನುದಾನ ರಹಿತ ಶಾಲಾ ಶಿಕ್ಷಕಿಯರು, ದಾದಿಯರು ಮತ್ತು ಶವ ಅಂತ್ಯಸಂಸ್ಕಾರ ನಡೆಸುವ ಕಾರ್ಯಕರ್ತರಿಗೆ ಸೇರಿ 250 ಅಧಿಕ ಮಂದಿಗೆ ದಿನಸಿ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಮಂಗಳೂರಿನ ಗಾಂಧಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನೆರವೇರಿತು.Distribution of groceries kit for Kovid Warriors from Mangalore South BJP Yuva Morcha

ಇನ್ನೂ ಇಂದು ನಗರದ ನಾಲ್ಕು ಭಾಗದಲ್ಲಿ ಏಕ ಕಾಲದಲ್ಲಿ ಕಿಟ್ ವಿತರಣಾ ಕಾರ್ಯಕ್ರಮ ನಡೆದಿದ್ದು ಮಂಗಳೂರಿನ ಶಾರದೋತ್ಸವ ಸಮೀತಿ ಕಟ್ಟಡ, ಕದ್ರಿ ವಿಶ್ವಹಿಂದೂ ಪರಿಷತ್ ವಿಶ್ವಶ್ರೀ ಕಟ್ಟಡ, ಶಕ್ತಿನಗರದ ಆರೋಗ್ಯ ಕೇಂದ್ರದಲ್ಲಿ ಕಿಟ್ ವಿತರಣೆ ನಡೆಸಲಾಯಿತು…. ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ದೇಶದಲ್ಲಿ ಕೊರೋನಾ ಸೊಂಕು ನಿಯಂತ್ರಣ ಹಿನ್ನೆಲೆ ಕೇಂದ್ರ ರಾಜ್ಯ ಸರ್ಕಾರ ವಿವಿಧ ಯೋಜನೆ ಯೋಚನೆಗಳನ್ನು ಜಾರಿ ಮಾಡಿದೆ ಇದಕ್ಕೆ ಪೂರಕವಾಗಿ ದೇಶಾದ್ಯಂತ ಕೊರೋನಾ ವಾರಿಯರ್ಗಳಗಿ ವಿವಿಧ ವರ್ಗಗಳ ಜನ್ರು ತಮ್ಮ ಸೇವೆ ನೀಡುತ್ತಿದ್ದಾರೆ ಅಂತಹ ವರ್ಗಗಳನ್ನು ಗುರುತಿಸಿ ಅವರ ಕುಟುಂಬಕ್ಕೆ ಧೈರ್ಯ ತುಂಬಾ ಕಾರ್ಯವನ್ನು ಜಿಲ್ಲಾ ಬಿಜೆಪಿ ಯುವ ಮೋರ್ಚ ಮಾಡ್ತಾ ಇದೆ ಇದು ನಿಜಕ್ಕೂ ಶ್ಲಾಘನೀಯ ವಿಚಾರವಾಗಿದೆ ಎಂದವರು ಹೇಳಿದರು.Distribution of groceries kit for Kovid Warriors from Mangalore South BJP Yuva Morcha

ಕಾರ್ಯಕ್ರಮದಲ್ಲಿ ಮಂಗಳೂರು ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್ ಶೇಣವ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಉದ್ಯಮಿ, ಬಿಜೆಪಿ ಮುಖಂಡ ರಾಜ್ ಗೋಪಾಲ್ ರೈ, ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಹೆಗ್ಡೆ, ಅಮಿತ್ , ಮನಪ ಸದಸ್ಯೆ ಜಯಲಕ್ಷ್ಮಿ ವಿ ಶೆಟ್ಟಿ, ಸಂಧ್ಯಾ ಮಹೋನ್ ಆಚಾರಿ, ಗಣೇಶ್ ಕುಳಾಲ್, ರಾಜೇಶ್ ಶೆಟ್ಟಿ, ಧುನುಶ್ ರೈ, ಪ್ರಜೈ, ಸುನೀಲ್, ದೀಕ್ಷಿತ್, ಸುಶಾಂತ್, ಪ್ರಥಮ್ , ಲತೇಶ್ ಮತ್ತಿತರರು ಉಪಸ್ಥಿತರಿದ್ದರು

Related posts

Leave a Reply

Your email address will not be published. Required fields are marked *