Header Ads
Breaking News

ನಿಷೇಧಿತ ಡ್ರಗ್ಸ್ ಮಾರಾಟ : ನೈಜೀರಿಯಾ ಪ್ರಜೆಗಳ ಬಂಧನ

ಅಕ್ರಮವಾಗಿ ಮಂಗಳೂರು ಮತ್ತು ಕೇರಳ ಭಾಗಕ್ಕೆ ಎನ್.ಡಿ.ಎಂ.ಎ ನಿಷೇಧಿತ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಪೊಲೀಸ್ ಕಾರ್ಯಚಣೆ ವೇಳೆ ಬಂಧಿಸಲಾಗಿದೆ ಸದ್ಯ ನಿಷೇಧಿತ ಡ್ರಗ್ ಮಾರಾಟ ಪ್ರಕರಣದಲ್ಲಿ 9 ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು

ಅವರು ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿ ನೈಜೀರಿಯಾ ದೇಶದ ಪ್ರಜೆಗಳು ಅಕ್ರಮವಾಗಿ ಕರ್ನಾಟಕದಲ್ಲಿ ನೆಲೆಸಿ ಉದ್ಯಮದ ಹೆಸರಲ್ಲಿ ಅಕ್ರಮ ಚಟುವಟುಕೆಗಳನ್ನು ನಡೆಸುತ್ತಿದ್ದಾರೆ. ಟೀ ಶರ್ಟ್ ಎಕ್ಸ್‌ಪೋರ್ಟ್ ಉದ್ಯಮದ ಹೆಸರಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಬೆಂಗಳೂರಿನಿಂದ ಇಬ್ಬರು ಡ್ರಗ್ ಪೆಡ್ಲರ್‌ಗಳಾದ ಪೌಲ್ ಒಹಮೋಬಿ ಇಫೆಚುಕು ಮತ್ತು ಉಚೆಚುಕು ಮಲಾಕಿ ಎಲಕ್ವಾಚಿ ಎನ್ನುವ ನೈಜೀರಿಯಾ ದೇಶದ ಪ್ರಜೆಗಳನ್ನು ಬಂಧಿಸಿದ್ದೇವೆ. ಇವರು ಮಂಗಳೂರು, ಕೇರಳ ಭಾಗಕ್ಕೆ ಡ್ರಗ್ ಸಪ್ಲೈ ಮಾಡುತ್ತಿದ್ದ ಆರೋಪಿಗಳಾಗಿದ್ದು ಈಗಾಗಲೇ 170 ಗ್ರಾಂ ಎಂ.ಡಿ.ಎಂ.ಎ ನಿಷೇಧಿತ ಡ್ರಗ್ ವಶಪಡಿಸಿಕೊಂಡಿದ್ದೇವೆ. ಪ್ರಕರಣದಲ್ಲಿ ಈ ಹಿಂದೆಯೇ 7 ಜನರನ್ನು ಬಂಧಿಸಿದ್ದೆವು. ಈಗ ನಿಷೇಧಿತ ಡ್ರಗ್ ಮಾರಾಟ ಪ್ರಕರಣದಲ್ಲಿ 9 ಆರೋಪಿಗಳನ್ನು ಬಂಧಿಸಿದ್ದೇವೆ. ಬಂಧಿತರಲ್ಲಿ ಮೂರು ಜನ ನೈಜೀರಿಯಾ ದೇಶದ ಪ್ರಜೆಗಳು ಎಂದು ಹೇಳಿದರು.ಈ ಸಂದರ್ಭ ಡಿಸಿಪಿ ಹರಿರಾಂ ಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *