Header Ads
Breaking News

ಲಾಕ್ ಡೌನ್ ಹಿನ್ನೆಲೆ: ಟ್ರಾಲ್ ಬೋಟ್ ಮೀನುಗಾರಿಕೆ ಸ್ಥಗಿತ

ಕೋವಿಡ್ ಸೋಂಕು ಹಿನ್ನೆಯಲ್ಲಿ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಮಂಗಳೂರಿನಲ್ಲಿ ಟ್ರಾಲ್ ಬೋಟ್ ಮೀನುಗಾರಿಗೆ ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ. ತಮಿಳುನಾಡು ಮತ್ತು ಆಂಧ್ರಪ್ರದೇಶದ ಮೀನುಗಾರರೇ ಇಲ್ಲಿ ಮೀನುಗಾರಿಕೆಯನ್ನು ನಡೆಸುತ್ತಿದ್ದು, ಲಾಕ್ ಡೌನ್ ಹೇರಿದ್ದರಿಂದ ಎಲ್ಲಾ ಮೀನುಗಾರರು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್ ಡೌನ್ ಹೇರಿ ಕಠಿಣ ನಿಯಮ ಜಾರಿಗೆ ತಂದಿದೆ. ಮಂಗಳೂರಿನ ಬಂದರನ್ನು ಮೀನುಗಾರಿಕಾ ಬೋಟ್‌ಗಳು ಲಂಗರು ಹಾಕಿವೆ. ಮೀನುಗಾರರು ಮೀನುಗಾರಿಕೆ ಇಲ್ಲದೆ ತುಂಬಲಾರದ ನಷ್ಟವನ್ನು ಅನುಭವಿಸುತ್ತಿದ್ದಾರೆ.

                                                                                                          ಪರ್ಸಿನ್ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಮೋಹನ್ ಬೆಂಗ್ರೆ

ಈ ಬಗ್ಗೆ ಕರ್ನಾಟಕ ರಾಜ್ಯ ಪರ್ಸಿನ್ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಮೋಹನ್ ಬೆಂಗ್ರೆ ಮಾತನಾಡಿ, ಇವತ್ತಿನಿಂದ ಮೀನುಗಾರಿಕೆಯನ್ನು ನಿಷೇಧ ಮಾಡಿ ಮೀನುಗಾರರು ಊರಿಗೆ ತೆರಳುತ್ತಿದ್ದಾರೆ. ಇದು ನಮಗೆ ಎರಡನೇ ವರ್ಷದ ಆಘಾತ ಎಂದ ಅವರು, ಮೀನುಗಾರಿಕೆಗೆ ತುಂಬಲಾರದ ನಷ್ಟ. ಸರ್ಕಾರವು ನಮ್ಮ ಮೇಲೆ ಗಮನ ಹರಿಸಿ ಮೀನುಗಾರರಿಗೆ ಸಹಾಯ ಹಸ್ತವನ್ನು ನೀಡಬೇಕಿದೆ ಎಂದು ವಿನಂತಿಸಿದರು.
ಒಟ್ಟಿನಲ್ಲಿ ಮೀನುಗಾರಿಕೆ ಇಲ್ಲದೆ ಮಂಗಳೂರಿನ ಬಂದರು ಪ್ರದೇಶ ಬಿಕೋ ಎನ್ನುತ್ತಿದೆ.

 

Related posts

Leave a Reply

Your email address will not be published. Required fields are marked *