Header Ads
Breaking News

ವಾರಾಂತ್ಯದ ಕರ್ಫ್ಯೂಗೆ ಮಂಗಳೂರು ಸ್ತಬ್ಧ

ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಲು ಜಿಲ್ಲಾಡಳಿತ ಕರ್ಫ್ಯೂ ನಿಯಮಾವಳಿ ಕಟ್ಟುನಿಟ್ಟು ಮಾಡಿದ್ದು, ವಾರಾಂತ್ಯದ ಕರ್ಫ್ಯೂಗೆ ಮಂಗಳೂರಿನಲ್ಲಿ ಉತ್ತಮ ಸ್ಪಂದನೆ ದೊರಕಿದೆ.

ನಿತ್ಯವೂ ಬೆಳಗ್ಗಿನ ಹೊತ್ತಿಗೆ ಸಾಕಷ್ಟು ಜನಸಂಚಾರ ಕಂಡು ಬರುತ್ತಿದ್ದರೂ ಇಂದು ಮಾತ್ರ ವಾಹನ, ಜನ ಸಂಚಾರವಿಲ್ಲದೆ ರಸ್ತೆಗಳು ಖಾಲಿ ಖಾಲಿ ಬಿದ್ದಿದೆ. ಬೆಳಗ್ಗೆ 6ರಿಂದ 9ರ ವರೆಗೆ ಸಡಿಲಿಕೆ ಇದ್ದ ಸಂದರ್ಭ ಸ್ವಲ್ಪ ಜನ ಓಡಾಟ ಕಂಡು ಬಂದಿದ್ದರೂ, ಆ ಬಳಿಕ ಜನಸಂಚಾರಕ್ಕೆ ಕಡಿವಾಣ ಬಿದ್ದಿದೆ.

ಹೆದ್ದಾರಿಗಳಲ್ಲಿ ಘನ ವಾಹನಗಳ ಓಡಾಟ ಕಂಡು ಬಂದಿದ್ದರೂ ಇತರ ವಾಹನ ಸಂಚಾರ ಬಹು ವಿರಳವಾಗಿತ್ತು.ಇನ್ನು ನಗರದ ಕೆಲವು ಕಡೆಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್‌ಗಳಿದ್ದು, ಸಂಚರಿಸುತ್ತಿರುವ ವಾಹನಗಳನ್ನು ತಪಾಸಣೆ ನಡೆಸಿ ಸೂಕ್ತ ಎಚ್ಚರಿಕೆಯನ್ನು ನೀಡಿ ಕಳುಹಿಸುತ್ತಿರುವ ದೃಶ್ಯ ಕಂಡುಬಂತು. ಒಟ್ಟಿನಲ್ಲಿ ಮಂಗಳೂರಿನಲ್ಲಿ ವಾರಾಂತ್ಯ ಕರ್ಫ್ಯೂ ಯಶಸ್ವಿಯಾಗಿದೆ.

Related posts

Leave a Reply

Your email address will not be published. Required fields are marked *