Header Ads
Breaking News

ಮಂಜನಾಡಿಯಲ್ಲಿ ಕೋವಿಡ್ ಟಾಸ್ಕ್‍ಪೋರ್ಸ್ ಸಭೆ

ಕೋವಿಡ್ ನಿಯಂತ್ರಣಕ್ಕೆ ಅನುಗುಣವಾಗಿ ಟಾಸ್ಕ್ ಫೆÇರ್ಸ್ ಕಾರ್ಯನಿರ್ವಹಿಸುತ್ತಾ ಮುಂದುವರಿಯಬೇಕು. ಲಾಕ್‍ಡೌನ್ ಕೊರೊನಾಕ್ಕೆ ಔಷಧಿಯಲ್ಲ. ಹಿಂದೆ ಲಾಕ್ಡೌನ್ ಮಾಡಿದ ನಂತರವೂ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಲೇ ಬಂದಿದೆ. ಸಮರ್ಪಕವಾಗಿ ತಳಮಟ್ಟದಲ್ಲಿ ಆಕ್ಷನ್ ಪ್ಲಾನ್ ರಚಿಸಿದಲ್ಲಿ ಮಾತ್ರ ನಿಯಂತ್ರಣ ಸಾಧ್ಯ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.

ಅವರು ಮಂಜನಾಡಿ ಗ್ರಾಮ ಪಂಚಾಯತ್‍ನ ದಿ.ಯು.ಟಿ ಫರೀದ್ ಸಭಾಂಗಣದಲ್ಲಿ ಜರಗಿದ ಕೋವಿಡ್-19 ಟಾಸ್ಕ್ ಪೋರ್ಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮಮಟ್ಟ ಮಾತ್ರವಲ್ಲ ವಾರ್ಡ್ ಮಟ್ಟದಲ್ಲೂ ಸಮಿತಿಯನ್ನು ರಚನೆ ಮಾಡಬೇಕು. ಪಾಸಿಟಿವ್ ಪ್ರಕರಣ ಕುರಿತು ಮಾಹಿತಿ ಗ್ರಾ.ಪಂ ಸದಸ್ಯರಲ್ಲಿ ಇರಬೇಕು. ಕೋವಿಡ್ ಟೆಸ್ಟ್ ನೀಡಿದವರು ವರದಿ ಬರುವವರೆಗೆ ಸುತ್ತಾಡದಂತೆ ಬೀಟ್ ಪೆÇಲೀಸರು ಕ್ರಮಕೈಗೊಳ್ಳಬೇಕು. ಅದನ್ನು ಅಧಿಕಾರಿಗಳು ಪರಿಶೀಲಿಸುತ್ತಿರಬೇಕು ಎಂದರು.
ಉಪತಹಶೀಲ್ದಾರ್ ವಿನೋದಾ ಯಸ್. ರಾವ್ , ತಾ.ಪಂ ಕಾರ್ಯನಿರ್ವಹಣಾ ಅಧಿಕಾರಿ ಎಂ.ಜೆ.ನಾಗರಾಜ್, ಮಂಜನಾಡಿ ಗ್ರಾ.ಪಂ ಅಧ್ಯಕ್ಷ ನಸ್ರೀನಾ ಇಕ್ಬಾಲ್, ಉಪಾಧ್ಯಕ್ಷ ವಿನ್ಸೆಂಟ್ ವೇಗಸ್ , ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಮ್ಯ ಕೆ.ಎಸ್, ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಿಸ್ರಿಯಾ, ಗ್ರಾಮಕರಣಿಕ ಪ್ರಸಾದ್ ಉಪಸ್ಥಿತರಿದ್ದರು

Related posts

Leave a Reply

Your email address will not be published. Required fields are marked *