Header Ads
Breaking News

ಮಂಜೇಶ್ವರದಲ್ಲಿ ಕೋವಿಡ್ ಜಾಗೃತಿ ಮಾಸ್ಕ್ ವಿತರಣಾ ಕಾರ್ಯಕ್ರಮ

ಮಂಜೇಶ್ವರ: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಎನ್‌ಪೋರ್ಸ್‌ಮೆಂಟ್ ತಂಡ, ಮೋಟಾರು ವಾಹನ ಇಲಾಖೆ ಹಾಗೂ ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘಟನೆಯ ಸಹಭಾಗಿತ್ವದಲ್ಲಿ ಪಬ್ಲಿಕ್ ಕ್ಯಾರಿಯರ್ ವಾಹನಗಳಿಗೆ ಫೇಸ್ ಶೀಲ್ಡ್ ಹಾಗೂ ಮಾಸ್ಕ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ತಲಪಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡು ಆರ್‌ಟಿಒ ಖಾಸಗಿ ಬಸ್ಸು ಉದ್ಯೋಗಿಗಳಿಗೆ ಫೇಸ್ ಶೀಲ್ಡ್ ಹಾಗೂ ಮಾಸ್ಕ್‌ನ್ನು ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಇನ್ನು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಪಬ್ಲಿಕ್ ಕ್ಯಾರಿಯರ್ ಉದ್ಯೋಗಿ ಇದನ್ನು ಧರಿಸುವುದು ನಿರ್ಬಂಧವಾಗಿರುವುದಾಗಿ ಹೇಳಿದರು.

ಈ ಸಂದರ್ಭ ಅಧಿಕಾರಿಗಳಾದ ಸಜು ಫ್ರಾನ್ಸಿಸ್, ರಾಜೇಶ್ ಕೊಡೋತ್, ಪ್ರವೀಣ್ ಕುಮಾರ್, ಗಣೇಶ್ ಕೆ.ವಿ, ಜಿಜೋ ವಿಜಯ್, ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘದ ಅಧ್ಯಕ್ಷ ತಿಮ್ಮಪ್ಪ ಭಟ್, ಕಾರ್ಯದರ್ಶಿ ರಾಜೇಶ್ ಯು, ಸುಬ್ಬಣ್ಣ ಆಳ್ವ, ಎಸ್ ಕೆ ಹಮೀದ್, ಚಂದ್ರಹಾಸ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *