Header Ads
Breaking News

ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಕನ್ನಡದಲ್ಲಿ ಪ್ರಮಾಣವಚನ ಸ್ವೀಕಾರ

ಮಂಜೇಶ್ವರ: ಈ ಸಲ ನಡೆದ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಭಾರಿ ಪೈಪೋಟಿ ನಡೆದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ವಿರುದ್ಧ ಗೆಲುವನ್ನು ಪಡೆದ ಮಂಜೇಶ್ವರ ಯುಡಿಎಫ್ ಅಭ್ಯರ್ಥಿ ಹಾಗೂ ಅಚ್ಚ ಕನ್ನಡಿಗನಾಗಿರುವ ಮಾತ್ರವಲ್ಲದೆ ಕನ್ನಡ ಪದವೀಧರನಾಗಿ ಮೊತ್ತ ಮೊದಲಾಗಿ ಕೇರಳ ವಿಧಾನ ಸಭೆಗೆ ಎಂಟ್ರಿಯಾಗಿರುವ ಎ ಕೆ ಎಂ ಅಶ್ರಫ್ ರವರು ಶಾಸಕರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.

ಕೇರಳದ ಹದಿನೈದನೇ ವಿಧಾನ ಸಭೆಯಲ್ಲಿ ಕನ್ನಡ ಬಾಷೆಯಲ್ಲಿ ಅಲ್ಲಾವುವಿನ ನಾಮದೊಂದಿಗೆ ಪ್ರಮಾಣ ವಚನ ಗೈದು ಶಾಸಕ ಪದವಿಯನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ಜೀವನದಿಂದಲೇ ಪ್ರತಿಯೊಂದು ಹೆಜ್ಜೆಯಲ್ಲೂ ಹಲವಾರು ಹೋರಾಟಗಳಲ್ಲಿ ಮತ್ತು ಚುನಾವಣೆಗಳಲ್ಲಿ ಗೆಲುವನ್ನೇ ಸಾಧಿಸಿರುವ ಎ ಕೆ ಎಂ ಅಶ್ರಫ್ ರವರು ಗಡಿಪ್ರದೇಶದಲ್ಲಿ ನಡೆದ ಹಲವಾರು ಕನ್ನಡ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.

ಈ ಸಲದ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿ ಎಂಬ ಹಿನ್ನೆಲೆಯಲ್ಲಿ ಕನ್ನಡಿಗರ ಮತವನ್ನು ಕೂಡಾ ತನ್ನತ್ತಿರ ಸೆಳೆಯುವುದರಲ್ಲಿ ಯಶಸ್ವನ್ನು ಕಂಡಿದ್ದಾರೆ. ಇವರ ವಿರುದ್ಧ ಸಮೀಪ ಸ್ಪರ್ಧಿ ಬಿಜೆಪಿ ಯ ಸುರೇಂದ್ರನ್ ಹಲವು ರೀತಿಯ ಆರೋಪಗಳನ್ನು ಹೊರಿಸಿ ಧರ್ಮದ ಹೆಸರಿನಲ್ಲಿ ಮತ ವಿಭಜನೆಗೆ ಶ್ರಮಪಟ್ಟರೂ ಎ.ಕೆ.ಎಂ ನ ವಿರುದ್ಧ ಅದು ಫಲಿಸಲಿಲ್ಲ.

ಕೇಂದ್ರ ಹಾಗೂ ಕರ್ನಾಟಕದ ಉನ್ನತ ಮಟ್ಟದ ಬಿಜೆಪಿಯ ಮಂತ್ರಿಗಳು , ಶಾಸಕರುಗಳು ಹಾಗೂ ನೇತಾರರು ಅದೆಷ್ಟು ಹಾರ ಸಾಹಸಪಟ್ಟರೂ ಬಿಜೆಪಿಗೆ ಖಾತೆಯನ್ನು ತೆರೆಯಲು ಸಾಧ್ಯವಾಗಿರಲಿಲ್ಲ. ತನ್ನ ಕ್ಷೇತ್ರದಲ್ಲಿ ಪ್ರತಿಯೊಬ್ಬ ಮತದಾರನ ಹೆಸರು ಕರೆದು ಮಾತನಾಡಿಸುವ ಚಾಣಕ್ಯತೆಯನ್ನು ಹೊಂದಿರುವ ಶಾಸಕ ಎ ಕೆ ಎಂ ಅಶ್ರಫ್ ರವರಿಂದ ಮಂಜೇಶ್ವರದ ಜನತೆ ಇನ್ನಷ್ಟು ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ.

Related posts

Leave a Reply

Your email address will not be published. Required fields are marked *