Header Ads
Breaking News

ಮಂಜೇಶ್ವರ: ಅಪಾಯವನ್ನು ಅಹ್ವಾನಿಸುತ್ತಿರುವ ಹೆಚ್‍ಟಿ ವಿದ್ಯುತ್ ಲೈನ್

ಕೈಗೆ ಎಟಕುವ ರೀತಿಯಲ್ಲಿ ಸಾರ್ವಜನಿಕ ವಲಯದಲ್ಲಿ ನೇತಾಡುತ್ತಿರುವ ಹೆಚ್‍ಟಿ ವಿದ್ಯುತ್ ತಂತಿಗಳು ಅಪಾಯವನ್ನು ಆಹ್ವಾನಿಸುತಿದ್ದರೂ ಸ್ಥಳೀಯರು ಹಲವಾರು ಸಲ ವಿದ್ಯುತ್ ಇಲಾಖೆಗೆ ದೂರನ್ನು ನೀಡಿದರೂ ಯಾರೂ ಇತ್ತ ತಿರುಗಿಯೂ ನೋಡಲಿಲ್ಲವೆಂಬುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ.

ಮಂಜೇಶ್ವರ ವಿದ್ಯುತ್ ಸೆಕ್ಷನ್ ವ್ಯಾಪ್ತಿಯಲ್ಲಿರುವ ಮಂಜೇಶ್ವರ ಗ್ರಾಮ ಪಂಚಾಯತು ಹನ್ನೊಂದನೇ ವಾರ್ಡು ಅಂಗಡಿಪದವು ಎಂಬ ಸ್ಥಳದಲ್ಲಿ ಸ್ಥಾಪಿಸಲಾಗಿರುವ ಕಂಬದಿಂದ ಹಾಕಲಾಗಿರುವ ಎಚ್ ಟಿ ಲೈನ್ ತಂತಿಗಳು ಕೆಲಭಾಗಕ್ಕೆ ಸರಿದು ನೇತಾಡುತ್ತಿದೆ. ಈ ಪ್ರದೇಶದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಅತ್ಯಧಿಕ ಮಂದಿ ಸಂಚರಿಸುವ ಸ್ಥಳವಾಗಿದ್ದು, ಆಗಾಗ ನೇತಾಡುವ ಕಂಬಿಗಳು ಸ್ಪರ್ಶಗೊಂಡು ವಿದ್ಯುತ್ ಶಾರ್ಟ್ ಆಗತ್ತಿದೆ. ಕೈಗೆಟಕುವ ಸ್ಥಿತಿಯಲ್ಲಿರುವ ತಂತಿಗಳನ್ನು ಮೇಲಕ್ಕೆ ಕಟ್ಟದಿದ್ದರೆ ಅಪಾಯ ಸಂಭವಿಸುವ ದಿನಗಳು ದೂರವಿರಲಾರದೆಂಬುದಾಗಿ ಸ್ಥಳೀಯರು ಹೇಳುತಿದ್ದಾರೆ. ದುರಂತ ಸಂಭವಿಸಿ ಮುಂಚಿತವಾಗಿ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *