Header Ads
Breaking News

ಮಂಜೇಶ್ವರ : ಕಳವು ನಡೆಸುತ್ತಿದ್ದಕಳ್ಳರಿಬ್ಬರನ್ನು ಪೊಲೀಸರಿಗೊಪ್ಪಿಸಿದ ಊರಿನವರು

ಮಂಜೇಶ್ವರ: ಅನ್ಯ ರಾಜ್ಯದ ಕಾರ್ಮಿಕನೊಬ್ಬನ ಕೈಯಿಂದ ಮೊಬೈಲ್ ಎಗರ್ಸಿ ಪರಾರಿಯಾಗುತ್ತಿರುವ ಮಧ್ಯೆ ಇತ್ತೀಚೆಗೆ ಮಂಜೇಶ್ವರ ಉಪ್ಪಳ ಪರಿಸರಗಳಲ್ಲಿ ವ್ಯಾಪಾರ ಕೇಂದ್ರಗಳನ್ನು ಕೇಂದ್ರೀಕರಿಸಿ ಕಳವು ನಡೆಸುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರಿಬ್ಬರನ್ನು ಊರವರು ಸೆರೆ ಹಿಡಿದು ಮಂಜೇಶ್ವರ ಪೊಲೀಸರಿಗೊಪ್ಪಿಸಿದ್ದಾರೆ.

ಮಂಜೇಶ್ವರ ರಾಗಂ ಜಂಕ್ಷನಿನ ರಸ್ತೆ ಬದಿಯಲ್ಲಿ ಮೊಬೈಲ್ ನೊಂದಿಗೆ ನಿಂತಿದ್ದ ಅನ್ಯ ರಾಜ್ಯದ ಕಾರ್ಮಿಕ ಬಳಿ ಬೈಕಿನಲ್ಲಿ ಆಗಮಿಸಿದ ಇಬ್ಬರು ಕಳ್ಳರು ಕರೆ ಮಾಡಲೆಂದು ಫೆÇೀನ್ ಕೇಳಿ ಪಡೆದುಕೊಂಡು ಅದರೊಂದಿಗೆ ಪರಾರಿಯಾಗುತ್ತಿರುವ ಮಧ್ಯೆ ಅನ್ಯ ರಾಜ್ಯದ ಕಾರ್ಮಿಕ ಒಬ್ಬನ ಶರ್ಟನ್ನು ಹಿಡಿದೆಳೆಯುವಾಗ ಬೈಕ್ ಮಗುಚಿದೆ. ಕೂಡಲೇ ಪರಿಸರದಲ್ಲಿದ್ದವರು ಆಗಮಿಸಿ ಬೈಕಿನಲ್ಲಿದ್ದ ಇಬ್ಬರನ್ನು ಸೆರೆ ಹಿಡಿದು ಮಂಜೇಶ್ವರ ಪೊಲೀಸರಿಗೊಪ್ಪಿಸಿದ್ದಾರೆ.

ಉಪ್ಪಳ ನಿವಾಸಿ ಅಬ್ದುಲ್ ರವೂಫ್ ಯಾನೆ ಮೀಸೆ ರವೂಫ್ ಹಾಗೂ ಕೋಝಿಕ್ಕೋಡ್ ವಡಗರ ತೊಟ್ಟಿಲ್ ಪಾಲಂ ನಿವಾಸಿ ಶೈಜು ಯಾನೆ ಶಿಜು ಬಂಧಿತ ಆರೋಪಿಗಳು. ಬಂಧಿತರಾದ ಇಬ್ಬರೂ ಹಲವಾರು ಪ್ರಕರಣಗಳ ಆರೋಪಿಯಾಗಿದ್ದು ಇದಕ್ಕೂ ಮುಂಚೆ ಹಲವೆಡೆ ಕಳವು ನಡೆಸಿದ ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.ಕಳೆದ ಕೆಲವು ತಿಂಗಳಿನಿಂದ ಮಂಜೇಶ್ವರ, ಉಪ್ಪಳ ಪರಿಸರಗಳಲ್ಲಿ ವ್ಯಾಪಾರ ಕೇಂದ್ರಗಳಲ್ಲಿ ವ್ಯಾಪಕ ಕಳ್ಳತನ ನಡೆಯುತ್ತಿದ್ದು ಇದರ ದೃಶ್ಯ ಸಿಸಿ ಕ್ಯಾಮರಾಗಳಲ್ಲೂ ಸೆರೆಯಾಗಿತ್ತು. ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಕಳ್ಳನ ದೃಶ್ಯಗಳು ಇದೀಗ ಊರವರು ಸೆರೆ ಹಿಡಿದು ಕೊಟ್ಟಿರುವ ಕಳ್ಳರಿಗೂ ಹೋಲಿಕೆಯಾಗುತ್ತಿರುವುದಾಗಿ ವ್ಯಾಪಾರಿಗಳು ಹೇಳುತ್ತಿದ್ದಾರೆ. ಪೊಲೀಸರು ಕೂಡಾ ಸೆರೆಗಿಡಾದ ಕಳ್ಳರನ್ನು ಹೆಚ್ಚಿನ ತನಿಖೆಗೊಳಪಡಿಸಿದ್ದು ಜೊತೆಯಾಗಿ ಕಳವು ನಡೆದ ಅಂಗಡಿಗಳ ಮಾಲೀಕರುಗಳನ್ನು ಕೂಡಾ ಕರೆಸಿ ಕಳ್ಳರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಇಂದು ಸೆರೆಗಿಡಾದವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ಮಂಜೇಶ್ವರ ಎಸೈ ರಾಘವನ್ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *