Header Ads
Breaking News

ಮತ್ತೆ ವೈರಲ್ ಆಯ್ತು ಪಂಪ್‍ವೆಲ್ ಫ್ಲೈಓವರ್ ಕೃತಕ ನೆರೆ

ಜಿಲ್ಲೆಯಾದ್ಯಂತ ಸುರಿಯುತ್ತಿರುವ ನಿರಂತರ ಮಳೆ ಮಂಗಳೂರು ನಗರ ಸೇರಿದಂತೆ ಹಲವೆಡೆ ಅವಾಂತರ ಸೃಷ್ಟಿಸಿದೆ. ಸುರಿದ ಭಾರೀ ಮಳೆಯಿಂದಾಗಿ ನಗರ ಪ್ರವೇಶಿಸುವ ಪಂಪ್ ವೆಲ್ ಮೇಲ್ಸೇತುವೆ ಅಡಿಭಾಗದಲ್ಲಿ ಕೃತಕ ನೆರೆ ಉಂಟಾಗಿದೆ.ಮಂಗಳೂರಿಗೆ ಪ್ರವೇಶಿಸುವ ಹಾಗೂ ನಿರ್ಗಮಿಸುವ ಎರಡೂ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದಾಗಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಪರಿಣಾಮ ವಾಹನಗಳು ನಂತೂರು ವೃತ್ತವಾಗಿ ಸುತ್ತಿ ಬಳಸಿ ನಗರ ಪ್ರವೇಶಿಸುವಂತಾಯಿತು. ಭಾರೀ ಮಳೆಯಿಂದಾಗಿ ನಗರದ ಹಲವು ರಾಜಕಾಲುವೆಗಳು, ಚರಂಡಿ ತೋಡುಗಳು ತುಂಬಿ ಹರಿದವು. 9 ಗಂಟೆಯ ಬಳಿಕ ಮಳೆ ಪ್ರಮಾಣ ತಗ್ಗಿದ್ದು, ಹನಿಹನಿಯಾಗಿ ಸುರಿಯುತ್ತಿದೆ. ನಗರದ ಪಂಪ್‍ವೆಲ್ ಸೇತುವೆ ಕೆಳಭಾಗ ಸೇರಿದಂತೆ ಬೆಳಗ್ಗಿನ ಹೊತ್ತು ನಗರದ ಕೆಲವು ಕಡೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಕೃತಕ ನೆರೆಯ ವಾತಾವರಣ ಸೃಷ್ಟಿಯಾಗಿತ್ತು. ಮಳೆ ತಗ್ಗುತ್ತಲೇ ಮಳೆ ನೀರು ಹರಿದು ಕೃತಕ ನೆರೆಯೂ ಇಳಿದು ಹೋಗಿದೆ. ಪಂಪ್‍ವೆಲ್ ಮೇಲ್ಸೇತುವೆ ಕೆಳಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾದ ಕಾರಣ ಬೆಳಗ್ಗೆ ಹೊತ್ತು ಖರೀದಿಗೆ ಮಂಗಳೂರಿಗೆ ವಾಹನದಲ್ಲಿ ಬಂದವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಪಂಪ್ ವೆಲ್ ಪ್ಲೈ ಓವರಿನ ಕೆಳಗಿನ ಸರ್ವಿಸ್ ರಸ್ತೆಯಲ್ಲಿ ಸರಿಯಾಗಿ ನೀರು ಹೋಗುವ ವ್ಯವಸ್ಥೆ ಇಲ್ಲದೆ, ಜನ ಪರದಾಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಮೂಲಕ ಮತ್ತೊಮ್ಮೆ ಪಂಪ್ ವೆಲ್ ಫ್ಲೈ ಓವರ್ ಸುದ್ದಿಗೆ ಗ್ರಾಸವಾಗಿದೆ. ಸಂಸದ ನಳಿನ್ ಕುಮಾರ್ ಸ್ವಲ್ಪ ಈ ಕಡೆಗೆ ಗಮನಕೊಡಿ ಎಂಬ ಆಗ್ರಹ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ. ಇನ್ನು ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಕರ್ನಾಟಕ ಬ್ಯಾಂಕ್ ಅಧಿಕಾರಿಗಳು, ಮಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತರಾದ ಸಂತೋಷ್ ಕುಮಾರ್ , ಮೂಡಾ ಅಧ್ಯಕ್ಷ ರವಿಶಂಕರ್ ವಿಜಾರು, ಪಾಲಿಕೆ ಕಾರ್ಪೋರೇಟರ್ ಸಂದೀಪ್ ಗರೋಡಿ, ಕಾವ್ಯ ನಟರಾಜ್ , ಭಾಸ್ಕರ್ ಚಂದ್ರಶೇಖರ್, ಭೇಟಿ ನೀಡಿದರು.ಈ ವೇಳೆ ಸ್ಥಳೀಯರಾದ ಶರಣ್ ಪಂಪ್‍ವೆಲ್ ಕೂಡ ಭಾಗಿಯಾಗಿದ್ರು. ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದುಕೊಟ್ಟರು.

 

Related posts

Leave a Reply

Your email address will not be published. Required fields are marked *