Header Ads
Breaking News

ಮನೆಗೆ ಸಿಡಿಲು ಬಡಿದು ಮಹಿಳೆಯರಿಗೆ ಗಾಯ

ವಿಟ್ಲ: ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ವಿಟ್ಲ ಮುಡ್ನೂರು ಗ್ರಾಮದಲ್ಲಿ ನಡೆದಿದೆ. ವಿಟ್ಲ ಮುಡ್ನೂರು ಗ್ರಾಮದ ಪೈಸಾರಿ ನಿವಾಸಿಗಳಾದ ರಮಾವತಿ, ಶ್ಯಾಮಲ ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವಿಟ್ಲ ಮೂಡ್ನೂರು ಗ್ರಾಮದ ಪೈಸಾರಿ ಎಂಬಲ್ಲಿ ಗೋಪಾಲಕೃಷ್ಣ ನಾಯಕ್ ವಾಸದ ಮನೆಗೆ ಸಿಡಿಲು ಬಡಿದಿತ್ತು. ಮನೆಯೊಳಗಡೆ ಇದ್ದ ಇಬ್ಬರು ಮಹಿಳೆಯರಿಗೆ ಗಾಯವಾಗಿದೆ. ಮನೆಯ ಮೇಲ್ಛಾವಣಿ ಕುಸಿದು ಸುಮಾರು ರೂ 50 ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ಸ್ಥಳಕ್ಕೆ ಗ್ರಾಮ ಕರಣಿಕ ಕರಿಬಸಪ್ಪ, ಸಹಾಯಕ ರುಕ್ಮಯ ಭೇಟಿ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *