Header Ads
Breaking News

ಮರವಂತೆಯಲ್ಲಿ ತೀವ್ರಗೊಂಡ ಕಡಲ್ಕೊರೆತ

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆಯಲ್ಲಿ ಮೀನುಗಾರಿಕಾ ಬಂದರಿನ ಉತ್ತರ ದಿಕ್ಕಿನ ಗೋಡೆಯುದ್ದಕ್ಕೂ ಸಮುದ್ರದ ಅಲೆಗಳು ಅಪ್ಪಳಿಸುತ್ತಿದೆ.
ಕೆಲವು ತಿಂಗಳುಗಳಿಂದ ಹುಣ್ಣಿಮೆ ಹಾಗೂ ಅಮಾವಾಸ್ಯೆ ದಿನದಂದು ಕಡಲ್ಕೊರೆತದ ತೀವ್ರತೆ ಹೆಚ್ಚಾದಾಗ ಸಮುದ್ರದ ಅಲೆಗಳು ಅಪ್ಪಳಿಸಿದ ಪರಿಣಾಮವಾಗಿ ಸುಮಾರು ಐದುನೂರು ಮೀಟರ್ ನಷ್ಟು ಜಾಗವನ್ನು ಆವರಿಸಿ ಮೀನುಗಾರಿಕಾ ಶೆಡ್ಡುಗಳು, ತೆಂಗಿನ ಮರಗಳು ಕಡಲಿನ ಒಡಲನ್ನು ಸೇರುತ್ತಿದೆ. ಇನ್ನೇನು ಕೆಲವೇ ಮೀಟರ್ ನಷ್ಟು ದೂರದಲ್ಲಿರುವ ಹೊಸದಾಗಿ ನಿರ್ಮಾಣ ಮಾಡಿರುವ ಕಾಂಕ್ರೀಟ್ ರಸ್ತೆ ಕೊಚ್ಚಿ ಹೋಗುವುದು ಖಚಿತವಾಗಿದೆ. ಈ ಕಡಲ್ಕೊರೆತದ ಬಗ್ಗೆ ಹಲವಾರು ಬಾರಿ ಜನಪ್ರತಿನಿಧಿಗಳಿಗೆ, ಸಂಬಂಧ ಪಟ್ಟ ಅಧಿಕಾರಿಗಳಿಗೂ ಕಡಲ್ಕೊರೆತದ ಚಿತ್ರಣದ ಜೊತೆಗೆ ಮನವಿ ಮಾಡಿದ್ದು ಬಂದು ವೀಕ್ಷಿಸಿ ಸರಿಮಾಡುವುದಾಗಿ ಭರವಸೆಯನ್ನು ನೀಡಿ ಹೋದವರು ಮತ್ತೆ ತನಗೆ ಸಂಬಂಧವಿಲ್ಲದಂತೆ ನಡೆದು ಕೊಂಡಿದ್ದಾರೆ ಎಂಬುದು ಅಲ್ಲಿಯ ನಾಗರಿಕರ ಹೇಳಿಕೆ.
ಅರಬ್ಬೀ ಸಮುದ್ರದಲ್ಲಿ ತಾಕ್ತೇ ಚಂಡಮಾರುತದ ಅಬ್ಬರಕ್ಕೆ ಅನಾಹುತ ಸಂಭವಿಸುವ ಮೊದಲೇ ಅನಾಹುತ ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಈ ಸಮಯದಲ್ಲಿ ಕೈ ಕಟ್ಟಿ ಕೂರದೆ ಮುಂಬರುವ ಅನಾಹುತದಿಂದ ಪಾರಾಗಲು ಶೀಘ್ರ ತಡೆ ಗೋಡೆ ನಿರ್ಮಾಣ ಮಾಡಬೇಕು, ಸೂಕ್ತ ಕ್ರಮ ಕೈ ಗೊಳ್ಳದಿದ್ದಲ್ಲಿ ಧರಣಿ ನಡೆಸ ಬೇಕಾಗ ಬಹುದು ಎಂದು ತಿಳಿಸಿದರು.

Related posts

Leave a Reply

Your email address will not be published. Required fields are marked *