Header Ads
Breaking News

ಮಳೆಯ ಮಧ್ಯೆಯೂ ಕೊವೀಡ್ ಲಸಿಕೆಗಾಗಿ ಮುಗಿಬಿದ್ದ ಜನ

ಕೆಲ ದಿನಗಳಿಂದ ಕೊವೀಡ್ ಲಸಿಕೆ ಬಾರದೆ ಕಾಯುತ್ತಿದ್ದ ಜನರಿಗೆ ಇದೀಗ ಬಂದಿದೆ ಎಂಬ ಮಾಹಿತಿ ದೊರಕುತ್ತಿದಂತೆ, ಮಳೆಯನ್ನೂ ಲೆಕ್ಕಿಸದೆ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಶಿ ಬಿದ್ದಿದ್ದು, ಈ ಅವ್ಯವಸ್ಥೆಗೆ ಪೂರಕವಾಗಿ ಕೂಪನ್ ನೀಡುವ ವ್ಯವಸ್ಥೆ ಕಲ್ಪಿಸದಿರುವುದೇ ಕಾರಣ ಎನ್ನುತ್ತಾರೆ ಜನತೆ.

ಎರಡನೇ ಹಂತದಲ್ಲಿ ನೀಡುವ ಲಸಿಕೆ 340 ನಿನ್ನೆ ಬಂದಿದ್ದು, ಅದನ್ನು ಈ ದಿನ ನೀಡಲಿದ್ದಾರೆ ಎಂಬ ಮಾಹಿತಿ ರವಾನೆಯಾಗುತ್ತಿದಂತ್ತೆ ಜನ ಸಾಗರವೇ ಸರ್ಕಾರಿ ಆಸ್ಪತ್ರೆಯ ಮುಂಭಾಗ ಸೇರಿದ್ದಾರೆ. ಈ ಬಗ್ಗೆ ಮಾತನಾಡಿದ ಸುಧಾಕರ್ ಪೂಜಾರಿ ಹಾಗೂ ಸರ್ವೊತಮ ಎಂಬವರು, ನಾವು ಮುಂಜಾನೆ 6-30ರ ಸುಮಾರಿಗೆ ಬಂದಿದ್ದೇವೆ. ಆ ಸಂದರ್ಭದಲ್ಲಿ ಬೆರಳೆಣಿಗೆ ಮಂದಿ ಮಾತ್ರ ಇದ್ದರು. ಆದರೆ ಆ ವೇಳೆ ಕೂಪನ್ ವಿತರಿಸಲು ಅಲ್ಲಿ ಯಾರೂ ಇಲ್ಲ ಒಂದು ವೇಳೆ ಆಶಾ ಕಾರ್ಯಕರ್ತೆಯನ್ನೂ ಇಲ್ಲ ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನೋ ಕೂಪನ್ ನೀಡುವುದಕ್ಕಾಗಿ ಬಳಸಿಕೊಳ್ಳುತ್ತಿದ್ದರೆ ಈ ಸಮಸ್ಯೆ ಉದ್ಭವಿಸುವ ಸಾಧ್ಯತೆ ಕಡಿಮೆ ಇತ್ತು. ಆದರೆ ಸಮಯ ಸರಿಯುತ್ತಿದ್ದಂತೆ ಜನ ಸೇರ ತೊಡಗಿದ್ದು, 9-30ಗಂಟೆಯ ಸುಮಾರಿಗೆ ಆಸ್ಪತ್ರೆ ಸಿಬ್ಬಂದಿಗಳು ಕೂಪನ್ ನೀಡಲು ಮುಂದಾದಾಗ ನೂಕುನುಗ್ಗಲು ಆರಂಭಗೊಂಡಿತ್ತು. ಇಂಥಹ ಸಮಸ್ಯೆ ಇದು ಮೊದಲಲ್ಲ ಆರಂಭದಿಂದಲೂ ಆಗುತ್ತಿದ್ದರೂ ಇದನ್ನು ಸರಿ ಪಡಿಸುವ ಮನಸ್ಥಿತಿ ಸಂಬಂಧಪಟ್ಟವರಿಗೆ ಇಲ್ಲದ ಕಾರಣ ಸಮಸ್ಯೆ ಬೆಟ್ಟದಂತೆ ಕಾಡುವಂತ್ತಾಗಿದೆ ಎಂಬುದಾಗಿ ಆರೋಪಿಸಿದ್ದಾರೆ.

Related posts

Leave a Reply

Your email address will not be published. Required fields are marked *